ಬೆಳಗಾವಿ: ವಡಗಾವಿ ಪಾಟೀಲ ಗಲ್ಲಿಯ ಮಂಗಾಯಿದೇವಿ ಜಾತ್ರೆ ಜುಲೈ 22 ರಿಂದ 24ರ ವರೆಗೆ ನಡೆಯಲಿದೆ. ದೇವಸ್ಥಾನದ ಮೇಲೆ ಕೋಳಿ ಮರಿಗಳನ್ನು ಹಾರಿಸಿ ಹರಕೆ ತೀರಿಸಲಾಗುತ್ತದೆ. ಈ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಹಸ್ರಾರು ಭಕ್ತರು ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸುವರು.