ಬೆಳಗಾವಿ :
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ್ ಕುಮಾರ್ ಎನ್. ಇವರು ʼಅನಾಲೈಸಿಸ್ ಆಫ್ ಎಲಸ್ಟೋಹೈಡ್ರೋಡೈನಾಮಿಕ್ ಲುಬ್ರಿಕೇಶನ್ ಯುಸಿಂಗ್ ಮಲ್ಟಿಗ್ರಿಡ್ ಆಂಡ್ ವೆವಾಲೇಟ್ ಮೇಥಡ್ʼ ಎಂಬ ವಿಷಯದ ಮೇಲೆ ಮಂಡಿಸಿದ ಪಿಹೆಚ್.ಡಿ. ಮಹಾಪ್ರಬಂಧಕ್ಕೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಪ್ರೊ. ವಿಶ್ವನಾಥ ಬಿ. ಅವಟಿ ಅವರ ಮಾರ್ಗದರ್ಶನದಲ್ಲಿ ಅವರು ಮಹಾಪ್ರಬಂಧವನ್ನು ಮಂಡಿಸಿದರು.