ಬಡೆಕೊಳ್ಳಮಠ:
ಬೆಳಗಾವಿ ತಾಲೂಕಿನ ಶ್ರೀ ಪಾವನಕ್ಷೇತ್ರ ಬಡೇಕೊಳ್ಳಮಠದ ಪವಾಡ ಪುರುಷ ಶ್ರೀ ನಾಗೇಂದ್ರ ಮಹಾಸ್ವಾಮಿಗಳವರ ಮಹಾಶಿವರಾತ್ರಿಯ ಜಾತ್ರೆಯು ಪ್ರತಿ ವರ್ಷದಂತೆ ಐದು ದಿನಗಳ ಕಾರ್ಯಕ್ರಮಗಳೊಂದಿಗೆ ಶ್ರದ್ದೆ ಮತ್ತು ಸಡಗರದಿಂದ ಜರಗಲಿದೆ. ಈ ಜಾತ್ರಾ ನಿಮಿತ್ತ ಕಾರ್ಯಕ್ರಮಗಳನ್ನು ಆಯೋಜನೆಗೊಂಡಿದ್ದು, ಭಕ್ತ ವೃಂದವು ಆಗಮಿಸಿ ಪೂಜ್ಯ ಅಜ್ಜನವರ ಆರ್ಶಿವಾದ ಅನುಗ್ರಹಕ್ಕೆ ಪಾತ್ರರಾಗಿ ಕೃತಾರ್ಥರಾಗಬೇಕು.
ಶುಕ್ರವಾರ ದಿನಾಂಕ 17 ರಂದು ಸಾಯಂಕಾಲ 5 ಗಂಟೆಗೆ ಶ್ರೀ ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳ ಸಂತಿಬಸ್ತವಾಡದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಬರುವ ಧ್ವಜ, ಶಿಂದೋಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಬಸವಗುರು ಸೇವಾ ಭಜನಾ ಸಂಘದ ನೇತ್ರತ್ವದಲ್ಲಿ ತರುವ ದ್ವಜ ಸೂತ್ರಗಳಿಂದ ಶ್ರೀ ಸದ್ಗುರು ನಾಗೇಂದ್ರ ಶಿವಯೋಗಿಗಳವರ ಮಠದ ಪರಂಪರೆಯ ಧರ್ಮ ಲಾಂಛನ ದ್ಯೋತಕ ವಾದ ಧ್ವಜಾರೋಹಣದೊಂದಿಗೆ ಜಾತ್ರೆಯ ಪ್ರಾರಂಭ.
ಶನಿವಾರ ದಿ. 18 ರಂದು ವಿಶ್ವಶಾಂತಿಗಾಗಿ ಶ್ರೀಮಠದಲ್ಲಿ ಮಹಾರುದ್ರಾಭಿಷೇಕ ನಂತರ ಮುಂ. 9.30 ಗಂಟೆಗೆ ಶ್ರೀ ಕಲ್ಲಯ್ಯ ಶಾಸ್ತ್ರಿ ಉದೋಶಿಮಠ ಹಿರೇ ಬಾಗೇವಾಡಿ ಹಾಗೂ ಸಂಗಡಿಗರು ಇವರ ನೇತ್ರತ್ವದಲ್ಲಿ ಹೋಮ. ಸಂಜೆ 4 ಗಂಟೆಗೆ ಪರಮಪೂಜ್ಯ ಶ್ರೀ ನಾಗೇಂದ್ರ ಸ್ವಾಮಿಗಳ ಪರಮ ಭಕ್ತರಾದ ರುದ್ರಗೌಡ ಪಾಟೀಲ, ಮಾಸ್ತಮರಡಿ ಇವರಿಂದ ನಿರ್ಮಿತವಾದ ಶ್ರೀ ನಾಗೇಂದ್ರ ಶಿವಾಲಯದಿಂದ ಪಲ್ಲಕ್ಕಿ, ಛತ್ರ ಚಾಮರ ಅಪ್ತಾಗಿರಿ, ಬೆತ್ತ ಮತ್ತು ಅಂಬಲಿ ಗುಗ್ಗರಿಗಳಿಂದೊಡಗೂಡಿ ಭಕ್ತ ಸಮೂಹದೊಂದಿಗೆ ಆಗಮಿಸಿದ ಹಾಗೂ ತಾರಿಹಾಳ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಆಗಮಿಸಿದ ಪಲ್ಲಕ್ಕಿಗಳನ್ನು ಶ್ರೀಗಳು ಹಾಗೂ ಮಠದ ಭಕ್ತರಿಂದ ವಾದ್ಯ ಮೇಳದೊಂದಿಗೆ ಬರಮಾಡಿಕೊಳ್ಳುವುದು. ಮಾಸ್ತಮರ್ಡಿ ಹರಿಭಜನಾ ಮಂಡಳಿ ನೇತ್ರತ್ವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಹರಿಭಜನಾ ಮಂಡಳಿಗಳು ಪಾಲ್ಗೊಳ್ಳುವವು.
8-15 ಗಂಟೆಯಿಂದ ಶ್ರೀ ಗಿರಿಮಲ್ಲ ಮಹಾರಾಜ ಹಾಗೂ ಮಂಡಳಿ, ಸಾಂಬ್ರಾ ಇವರಿಂದ ಕೀರ್ತನೆ. ಮತ್ತು ಶ್ರೀ ಸಿದ್ದೇಶ್ವರ ಭಜನಾ ಸಂಘ ಹಿರೇಬಾಗೇವಾಡಿ ಇವರಿಂದ ಭಜನೆ.
ರವಿವಾರ ದಿನಾಂಕ: 19 ರಂದು ಬೆಳಿಗ್ಗೆ 8 ಗಂಟೆಯಿಂದ ಮಹಾರುದ್ರಾಭಿಷೇಕ, 11.30 ರಿಂದ ಶ್ರೀಗಳವರ ಪಾದಪೂಜೆ, ಮಧ್ಯಾಹ್ನ 1 ಗಂಟೆಗೆ ರಥೋತ್ಸವ ಮ. 2-30 ಕ್ಕೆ ಮಹಾಪ್ರಸಾದ ಸಂಜೆ 4 ಗಂಟೆಗೆ ಶ್ರೀ ಬಲಭೀಮ ಯುವಕ ಮಂಡಳ, ಯರಮಳ್ಳಿ ಇವರಿಂದ ಸೈಕಲ್ ವೃತ್ತಾಕಾರ ಚಲನೆಯ ಕಾರ್ಯಕ್ರಮಗಳು. ಸಾ. 6-30 ಗಂಟೆಗೆ ಹಿರೇಬಾಗೇವಾಡಿ ಶಾಲಾ ಬಾಲಕ-ಬಾಲಕಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ರಾತ್ರಿ 10-30 ಘಂಟೆಗೆ ಆನಂದ ಸೌಂಡ್ಸ್ ಹಿರೇಬಾಗೇವಾಡಿ ಇವರಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ.
ಸೋಮವಾರ 20 ರಂದು ಮುಂ.8 ರಿಂದ 2 ರವರೆಗೆ ವಿವಿಧ ಊರುಗಳ ಭಜನಾ ಮಂಡಳಿಗಳಿಂದ ಭಜನೆ ಹಾಗೂ ಕೀರ್ತನೆ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಹಿರೇಬಾಗೇವಾಡಿ ಭಕ್ತಾದಿಗಳ ನೇತ್ರತ್ವದಲ್ಲಿ ಬಯಲು ಕುಸ್ತಿಗಳು, ರಾತ್ರಿ 10.30 ಕ್ಕೆ ಆನಂದ ಸೌಂಡ್ಸ್ ಹಿರೇಬಾಗೇವಾಡಿ ಇವರಿಂದ ನಗೆಹಬ್ಬ ಕಾರ್ಯಕ್ರಮ ಜರುಗಲಿವೆ.
ಮಂಗಳವಾರ 21 ರಂದು ಮದ್ಯಾಹ್ನ 2 ಗಂಟೆಗೆ ಪಲ್ಲಕ್ಕಿ ಬಿಳ್ಕೊಡುವ ಸಮಾರಂಭ, ಸಂಜೆ 4 ಗಂಟೆಗೆ ಧ್ವಜಾರೋಹಣದೊಂದಿಗೆ ಜಾತ್ರೆಯ ಮುಕ್ತಾಯವಾಗುತ್ತದೆ. ಈ ಜಾತ್ರೆಗೆ ಸದ್ಭಕ್ತರು ಆಗಮಿಸಿ ದರ್ಶನ ಆಶೀರ್ವಾದ ಪಡೆದುಕೊಂಡು ಪುನೀತರಾಗಬೇಕೆಂದು ಶ್ರೀ ಪರಮಪೂಜ್ಯ ನಾಗಯ್ಯ ಸ್ವಾಮಿಗಳು ಪಾವನಕ್ಷೇತ್ರ ಬಡೇಕೊಳ್ಳಮಠ, ತಾರಿಹಾಳ ತಾ:ಜಿ: ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.9538110115
ಸಂಪರ್ಕಿಸಬಹುದು.