ಮುಂಬೈ:
ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮನಾಬಾದ್ ಜಿಲ್ಲೆಗಳ ಹೆಸರುಗಳ ಬದಲಾವಣೆ ಬಗ್ಗೆ ಆದೇಶ ಹೊರಡಿಸಲಾಗಿದೆ.
ಸಿಎಂ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಔರಂಗಾಬಾದ್ ಜಿಲ್ಲೆಯನ್ನು ಛತ್ರಪತಿ ಸಾಂಭಾಜಿನಗರ, ಉಸ್ಮನಾಬಾದ್ ಜಿಲ್ಲೆಯನ್ನು ಧಾರಾಶಿವ ಎಂದು ಹೆಸರು ಬದಲಿಸಿ ಆದೇಶ ಹೊರಡಿಸಿದೆ.
ಕೆಲವು ತಿಂಗಳ ಹಿಂದೆ ಈ ಎರಡು ಹೆಸರುಗಳ ಬಗ್ಗೆ ಸಲಹೆ ಮತ್ತು ಆಕ್ಷೇಪಗಳನ್ನು ರಾಜ್ಯ ಸರ್ಕಾರ ಆಹ್ವಾನಿಸಿತ್ತು.
ಹೆಸರು ಬದಲಾವಣೆ ಮಾಡುವುದರ ಬಗ್ಗೆ ಮಹಾ ವಿಕಾಸ ಅಘಾಡಿ ಸರ್ಕಾರದ ಕೊನೆಯ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಕಳೆದ ವರ್ಷದ ಜುಲೈನಲ್ಲಿ ಹೆಸರು ಬದಲಾವಣೆಗೆ ಹಾಲಿ ಸರ್ಕಾರ ಅನುಮೋದನೆ ನೀಡಿತ್ತು.