ಬೆಳಗಾವಿ :
ಬೆಂಗಳೂರಿನ ಎನ್ಎಂಕೆಆರ್ ವಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಬೆಳಗಾವಿಯ ದೇವರಾಜ ಅರಸು ಬಡಾವಣೆಯ ನಿವಾಸಿ ಮಹಾಂತೇಶ ಬಸವಣ್ಣೆಪ್ಪ ಹವಾಣಿ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಅವರು ಮಂಡಿಸಿದ An Economic Analysis of Cropping Pattern in Karnataka:A Case Study in Belagavi District ಎಂಬ ಮಹಾಪ್ರಬಂಧಕೆ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪದ್ಮಿನಿ ಎಸ್.ವಿ. ಅವರು ಮಹಾಂತೇಶ ಅವರಿಗೆ ಮಾರ್ಗದರ್ಶನ ನೀಡಿದ್ದರು.
ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದವರಾದ ಅವರು ತಮ್ಮ ಪದವಿ ಶಿಕ್ಷಣವನ್ನು ಬೆಳಗಾವಿಯ ಲಿಂಗರಾಜ ಕಾಲೇಜು ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಪೂರೈಸಿದ್ದಾರೆ.
ಅಭಿನಂದನೆ :
ಪಿ ಎಚ್ ಡಿ ಗೌರವಕ್ಕೆ ಪಾತ್ರರಾಗಿರುವ ಮಹಾಂತೇಶ ಅವರಿಗೆ ಬೆಳಗಾವಿಯ ಜನ ಸಾಹಿತ್ಯ ಪೀಠ ಹಾಗೂ ಜನಜೀವಾಳ ದಿನ ಪತ್ರಿಕೆ ಅಭಿನಂದನೆ ಸಲ್ಲಿಸಿದೆ.
HoD Economics of NMKRV College for Women, Bangalore and resident of Devaraj Aras Colony of the city Mahantesh B Havani has been awarded Ph.D by Tumkur University for his thesis entitled ‘An Economic Analysis of Cropping Pattern in Karnataka:A Case Study in Belagavi District’ in Economics.He carried out his research work under the guidance of Dr.Padmini.S.V Assistant Professor, Department of Economics, University College of Arts, Tumkur University,Tumkuru.