This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಕರ್ನಾಟಕದ ಕಾಲುಭಾಗದ ಮೇಲೆ ಮಹಾ ಕಣ್ಣು : ವಿವಾದಾತ್ಮಕ ಗಡಿ ಠರಾವ್ ಅಂಗೀಕರಿಸಿದ ಮಹಾರಾಷ್ಟ್ರ A big eye on a quarter of Karnataka: Disputed border Tharav accepted by Maharashtra


 

ನಾಗಪುರ :
ಬೆಳಗಾವಿ,ಕಾರವಾರ,ನಿಪ್ಪಾಣಿ, ಬೀದರ,ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು”ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸರ್ವಾನುಮತದ
ನಿರ್ಣಯವನ್ನು ಇಂದು ಮಂಗಳವಾರ ಮಧ್ಯಾನ್ಹ ಮಹಾರಾಷ್ಟ್ರದ ನಾಗ್ಪೂರದಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಅಧಿವೇಶನದಲ್ಲಿ ಗಡಿವಿವಾದ ಕುರುತು ವ್ಯಾಪಕ ಚರ್ಚೆ ನಡೆಯಿತು. ಮಹತ್ವದ ಅಂಶಗಳು ಇಲ್ಲಿವೆ;
1) ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಶ್ರೀ ಏಕನಾಥ ಶಿಂದೆ ಅವರು ಕರ್ನಾಟಕದ ಗಡಿಭಾಗದಲ್ಲಿ ನಡೆದ ಚಳವಳಿಯಲ್ಲಿ ಮಡಿದ ಮರಾಠಿ‌ ಭಾಷಿಕರನ್ನು ಹುತಾತ್ಮರೆಂದು ಪರಿಗಣಿಸಿ ಅವರಿಗೆ ಸ್ವಾತಂತ್ರ್ಯ ಯೋಧರ ಕುಟುಂಬಳಿಗೆ ನೀಡುವ ಮಾಸಿಕ 20 ಸಾವಿರ ರೂ.ಪಿಂಚಣಿ ನೀಡಲಾಗುವದು.

2)ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಎರಡು ಸಾವಿರ ಕೋ.ರೂ.ಗಳ ಮಂಜೂರು ಮಾಡಲಾಗಿದೆ.

3)ಕರ್ನಾಟಕದ 865 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿಗರಿಗೆ ಮಹಾರಾಷ್ಟ್ರದಲ್ಲಿ
ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುವದು.ಅಲ್ಲದೇ ಬೆಳಗಾವಿ ಸಹಿತ ಎಲ್ಲ ಗ್ರಾಮ ಪಟ್ಟಣಗಳಲ್ಲಿ ನೋಂದಾಯಿತ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಒದಗಿಸಲಾಗುವದು.

4)2004 ರಲ್ಲಿ ಮಹಾರಾಷ್ಟ್ರ ಸರಕಾರ ಸರ್ವೋನ್ನತ ನ್ಯಾಯಾಲಯದಲ್ಲಿ
ದಾಖಲಿಸಿರುವ ಗಡಿವಿವಾದ ದಾವೆಯಲ್ಲಿ
ವಾದಿಸುವ ಸಲುವಾಗಿ ಹಿರಿಯ ಸಂವಿಧಾನ ತಙ್ಞರನ್ನು ನೇಮಿಸಲಾಗಿದೆ. ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಅವರನ್ನೂ ಸಹ ಸಂಪರ್ಕಿಸಲಾಗಿದ್ದು ಅವರೂ ವಾದ ಮಂಡನೆಗೆ ಒಪ್ಪಿದ್ದಾರೆ.

5)”ಛಗನ್ ಭುಜಬಲ ಅವರೇ ನೀವೂ ಬೆಳಗಾವಿ ಗಡಿ ಚಳವಳಿಯಲ್ಲಿ ಲಾಠಿ ಏಟು ತಿಂದಿದ್ದೀರಿ.ನಾನೂ ಆಲ್ಲಿ ಕಾರಾಗೃಹ ವಾಸ ಅನುಭವಿಸಿದ್ದೇನೆ” ಎಂದು ಶಿಂದೆ ಹೇಳಿದರು.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತಾನಾಡುತ್ತ ಒಂದು ಹಂತದಲ್ಲಿ ಸರ್ವೋನ್ನತ ನ್ಯಾಯಾಲಯದಲ್ಲಿ ಗಡಿವಿವಾದ ಪ್ರಕರಣ ಬಾಕಿಯಿದ್ದು ನಾವು ಅಂಗೀಕರಿಸುವ ನಿರ್ಣಯವು ನ್ಯಾಯಾಂಗ ನಿಂದಣೆ ಆಗಬಹುದೆ? ಎಂಬುದನ್ನೂ ಯೋಚಿಸಬೇಕು ಎಂದರು.

ಡಿಸೆಂಬರ್ 14 ರಂದು ಕೇಂದ್ರ ಗೃಹಸಚಿವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ನಂತರವೂ ಕರ್ನಾಟಕದ ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರು ಗಡಿವಿವಾದವನ್ನು ಮತ್ತೆ ಮತ್ತೆ ಕೆದಕುತ್ತಿದ್ದಾರೆ ಎಂದು ಸದನದಲ್ಲಿ ಮಾತನಾಡಿದ ಮುಖಂಡರು ಆರೋಪಿಸಿದರು.

ಸಭಾಧ್ಯಕ್ಷರು ನಿರ್ಣಯವನ್ನು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅಂಗೀಕಾರವಾಯಿತು.


Jana Jeevala
the authorJana Jeevala

Leave a Reply