ಬೆಳಗಾವಿ :
ಇಲ್ಲಿಯ ಸಾಮೂಹಿಕ ಗಣಹೋಮ ಸೇವಾ ಸಮಿತಿ ವತಿಯಿಂದ ಆರ್ ಪಿ ಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠ ಹಾಗೂ ಸಭಾಭವನದಲ್ಲಿ ಸೆ. 19 ರಂದು 108 ತೆಂಗಿನಕಾಯಿಗಳ ಮಹಾ ಗಣಪತಿಯಾಗ ಹಮ್ಮಿಕೊಳ್ಳಲಾಗಿದೆ. ಗೋಪಾಲಕೃಷ್ಣ ಶರ್ಮಾ ಅವರ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಗಣಹೋಮ ನಡೆಯಲಿದೆ.
ವಿಶ್ವಕಲ್ಯಾಣಕ್ಕಾಗಿ, ವಿಶೇಷವಾಗಿ ದೇಶದ ಸುಭಿಕ್ಷೆಗಾಗಿ, ಗಣರಾಯನ ಕೃಪೆಗಾಗಿ 108 ತೆಂಗಿನಕಾಯಿಗಳ ಮಹಾ ಗಣಪತಿಯಾಗ ನಡೆಸಲಾಗುತ್ತಿದೆ.
ಬೆಳಗ್ಗೆ 7:30 ಗಂಟೆಗೆ ಗಣಪತಿ ಚರಮೂರ್ತಿ ತರುವುದು, ಪ್ರಾರ್ಥನೆ, ಪುಣ್ಯಾಹವಾಚನ, ಪ್ರತಿಷ್ಠಾಪನೆ, ಕಲಶೋಕ್ತಾ ಪೂಜೆ, ಗಣ ಹೋಮ, ಮಧ್ಯಾಹ್ನ 11:30 ಕ್ಕೆ ಪೂರ್ಣಾಹುತಿ, ಮಂತ್ರ ಪುಷ್ಪ ಪ್ರಸಾದ ವಿತರಣೆ, ಸಂಜೆ 7 ಗಂಟೆಗೆ ಗಣಪತಿ ದೇವರಿಗೆ ರಂಗ ಪೂಜೆ, ದೀಪಾರಾಧನೆ, ಮಂತ್ರ ಪುಷ್ಪ, ಅಷ್ಟಾವಧಾನ, ಮಹಾಮಂಗಳಾರತಿ, ಗಣಪತಿ ವಿಸರ್ಜನೆ ನಡೆಯಲಿದೆ ಎಂದು ಸಾಮೂಹಿಕ ಗಣಹೋಮ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.