ಬೆಳಗಾವಿ : ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ತನ್ನಿಂದ ದೂರವಾದ ಹಿನ್ನೆಲೆಯಲ್ಲಿ ಕೋಪದಿಂದ ಆ ವಿವಾಹಿತೆಯನ್ನು ಬರ್ಬರವಾಗಿ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಖಾನಾಪುರ ತಾಲೂಕಿನ ಬೀಡಿ ಗ್ರಾಮದ ರೇಶ್ಮಾ ತಿರವೀರ (28) ಪ್ರಿಯಕರನಿಂದ ಹತ್ಯೆಯಾದ ದುರ್ದೈವಿಯಾಗಿದ್ದು, ಆನಂದ ಸುತಾರ (30) ಆತ್ಮಹತ್ಯೆಗೆ ಶರಣಾದ ವಿವಾಹಿತನಾಗಿದ್ದಾನೆ.
ಘಟನೆಯ ವಿವರ :
ಆನಂದ-ರೇಶ್ಮಾ ಇವರಿಬ್ಬರು ಒಂದೇ ಗ್ರಾಮದವರಾಗಿದ್ದು ಇಬ್ಬರ ನಡುವೆ ಮೊದಲಿನಿಂದಲೂ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ ಇವರಿಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ. ರೇಶ್ಮಾ ವಿವಾಹಿತೆ ಎಂದು ಗೊತ್ತಿದ್ದರೂ ಆನಂದ ಅವಳ ಜೊತೆ ಸಂಬಂಧವನ್ನು ಮುಂದುವರೆಸಿದ್ದ.
ಇವರಿಬ್ಬರೂ ಮೇಲಿಂದ ಮೇಲೆ ಭೇಟಿಯಾಗುತ್ತಿದ್ದರು ಮತ್ತು ಮೊಬೈಲ್ ನಲ್ಲಿ ದಿನನಿತ್ಯ ಮಾತಾಡುತ್ತಿದ್ದರು. ರೇಶ್ಮಾಳ ಮನೆಗೆ ಆನಂದ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ರೇಶ್ಮಾ ಮತ್ತು ಆನಂದ ಅವರ ಸಂಬಂಧದ ವಿಷಯ ರೇಶ್ಮಾಳ ಪತಿಗೆ ಕೆಲ ದಿನಗಳ ಹಿಂದೆ ತಿಳಿದಿದೆ
ಅವರು ಹಿರಿಯರ ಮೂಲಕ ನಂದಗಡ ಪೊಲೀಸ್ ಠಾಣೆಗೆ ತೆರಳಿ ಆನಂದ ವಿರುದ್ಧ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ನಂದಗಡ ಪೊಲೀಸರು ಅವರನ್ನು ಠಾಣೆಗೆ ಕರೆಸಿ ರೇಶ್ಮಾಳ ತಂಟೆಗೆ ಹೋಗದಂತೆ ತಿಳಿ ಹೇಳಿ ತಪ್ಪೊಪ್ಪಿಗೆ ಬರೆಸಿಕೊಂಡು ಕಳಿಸಿದ್ದರು. ಇದಾದ ಬಳಿಕ ಹಲವು ದಿನಗಳ ಕಾಲ ರೇಶ್ಮಾ-ಆನಂದ ಪರಸ್ಪರ ಮಾತಾಡಿರಲಿಲ್ಲ.
ತನ್ನ ಪ್ರೇಯಸಿ ತನ್ನಿಂದ ಅಂತರ ಕಾಯ್ದುಕೊಂಡಿದ್ದರಿಂದ ಮನನೊಂದಿದ್ದ ಆನಂದ ಶುಕ್ರವಾರ ಆಕೆಯ ಮನೆಗೆ ನುಗ್ಗಿ ಆಕೆಯ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದು ಗಾಯಗೊಳಿಸಿ ಆಕೆಯನ್ನು ಸ್ಥಳದಲ್ಲೇ ಕೊಂದುಹಾಕಿದ್ಧಾನೆ.
ಪ್ರೇಯಸಿ ಮೃತಪಟ್ಟ ಬಳಿಕ ತಾವೂ ಚಾಕುವಿನಿಂದ ಇರಿದುಕೊಂಡಿದ್ದನು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟರಿವುದಾಗಿ ಘಟನೆಯ ತನಿಖೆ ಕೈಗೊಂಡ ನಂದಗಡ ಠಾಣೆಯ ಪೊಲೀಸರು ತಿಳಿಸಿದ್ದಾರೆ.