ಬೆಳಗಾವಿ : ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದ ಮೇಲೆ ರಾಯಬಾಗ ತಾಲೂಕಿನ ಮೇಕಳಿ ಗ್ರಾಮದ ರಾಮ ಮಂದಿರ ಮಠದ ಲೋಕೇಶ್ವರ ಸ್ವಾಮಿಯನ್ನು ಮೂಡಲಗಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಲೋಕೇಶ್ವರ ಸ್ವಾಮಿ ಮಠದ ಭಕ್ತರೊಬ್ಬರ ಮಗಳನ್ನು ಬೆಳಗಾವಿ ಮತ್ತು ಬಾಗಲಕೋಟನ ಲಾಡ್ಜ್ ಗಳಿಗೆ ಕರೆದುಕೊಂಡು ಹೋಗಿ ಹಲವು ಸಲ ಅತ್ಯಾಚಾರವೆಸಗಿದ್ದಾರೆ.
ಬಾಲಕಿಗೆ ಸ್ವಲ್ಪ ಹಣ ನೀಡಿ ಮನೆಗೆ ಹೋಗಲು ಸೂಚಿಸಿ ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದ. ಬಾಲಕಿಯ ಪಾಲಕರು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಮಠ ಪರಿಶೀಲಿಸಿದ ಪೊಲೀಸರು ಅಲ್ಲಿ ಕೆಲವು ಶಸ್ತ್ರಾಸ್ತ ವಶಕ್ಕೆ ಪಡೆದಿದ್ದಾರೆ.