ಬೆಳಗಾವಿ: ರಾಜ್ಯದಲ್ಲಿ ವಿವಿಧ ಕಡೆ ಬೆಳ್ಳಂ ಬೆಳಗ್ಗೆ ಭ್ರಷ್ಟ್ರರಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದರೆ, ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಬೆಳಗಾವಿ, ಬೆಂಗಳೂರು, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ದಾಳಿ ನಡೆಸಿ ಭ್ರಷ್ಟರ ಬೇಟೆ ಆಡುವ ಮೂಲಕ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ದಾಳಿ ವೇಳೆ ಸಿಕ್ಕ ಸಂಪತ್ತು ವಶಕ್ಕೆ ಪಡೆದಿದ್ದಾರೆ.
ಪ್ರಮುಖವಾಗಿ ಬೆಂಗಳೂರಲ್ಲಿ ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಅವರ ನಾಗರಬಾವಿ, ಗೋವಿಂದರಾಜನಗರ, ಯಲಹಂಕ ಭಾಗದಲ್ಲಿ ದಾಳಿ ನಡೆಸಲಾಗಿದ್ದು ಪರಿಶೀಲನೆ ನಡೆಸಲಾಗ್ತಿದೆ.
ಬೆಳಗಾವಿಯ ರಾಮತೀರ್ಥನಗರದಲ್ಲಿ ಮನೆಯ ಹೊಂದಿರುವ ಮೇಲೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ ಅಶೋಕ್ ವಾಸನದ್ ಅವರ ಮನೆಯ ದಾಳಿಯಲ್ಲಿ ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ಒಂದೂವರೆ ಲಕ್ಷ ನಗದು ಪತ್ತೆಯಾಗಿದೆ.
ಧಾರವಾಡದ ಅವರ ಕಚೇರಿ ಮೇಲೂ ಏಕಕಾಲಕ್ಕೆ ದಾಳಿ ಮಾಡಲಾಗಿದೆ. ಧಾರವಾಡ ಲೋಲಾಯುಕ್ತ ಅಧಿಕಾರಿಗಳಿಂದ ಬೆಳಗಾವಿಯಲ್ಲಿ ಶೋಧಕಾರ್ಯ ನಡೆಸಲಾಗಿದೆ.