ಬೆಳಗಾವಿ: ಲೋಕಾಯುಕ್ತ ಎಸ್ ಪಿ ಹನುಮಂತ ರಾಯ ಅವರ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶನಿವಾರದಂದು ಮೂವರು ಅಧಿಕಾರಿಗಳಿಗೆ ಸೇರಿದ ಐದು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ದಲಿಂಗಪ್ಪ ಬಾನಸಿ ಅವರ ಬೆಳಗಾವಿ ವಿದ್ಯಾನಗರದ ಮನೆ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದರು.
ಧಾರವಾಡ ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಎಚ್. ಸಿ.ಸುರೇಶ ಅವರ ಬೆಳಗಾವಿ ಹನುಮಾನ ನಗರ ಮನೆ ಮೇಲೆ ಲೋಕಾಯುಕ್ತ ದಾಳಿ ದಾಳಿ ನಡೆಸಿದರು.
ಗದಗ ನಿರ್ಮಿತಿ ಕೇಂದ್ರದ ಯೋಜನೆ ನಿರ್ದೇಶಕ ಗಂಗಾಧರ ಶಿರೋಳ ಅವರಿಗೆ ಸೇರಿದ ಬೆಳಗಾವಿ ಹನುಮಾನನಗರದ ಮೇಲೆ ದಾಳಿ ನಡೆಸಿದರು.

 
             
         
         
        
 
  
        
 
    