ಬೆಳಗಾವಿ : ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎಂಬ ನೂತನ ಸುರಕ್ಷತಾ ವ್ಯವಸ್ಥೆಯನ್ನು ಬೆಳಗಾವಿ ನಗರ ಪೊಲೀಸರು ಲೋಕಾರ್ಪಣೆಗೊಳಿದ್ದಾರೆ. ಏನಿದು ಲಾಕ್ಡ್ ಹೌಸ್ ಸಿಸ್ಟಮ್? ಇಲ್ಲಿದೆ ಮಾಹಿತಿ.
ನಗರದಿಂದ ಹೊರಡುವ ಯಾವುದೇ ವ್ಯಕ್ತಿ ತಮ್ಮ ವಿಳಾಸ, ಸ್ಥಳ ಪಿನ್ ಮತ್ತು ಗೈರುಹಾಜರಿಯ ಅವಧಿಯನ್ನು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಿರುವ ಸಂಖ್ಯೆಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು.
ಕಂಟ್ರೋಲ್ ರೂಂ: 8277951146 ಸಂಖ್ಯೆಗೆ ವಾಟ್ಸಪ್ ಮೂಲಕ ಮಾಹಿತಿ ಕಳುಹಿಸಬಹುದು. ಡೇಟಾವನ್ನು ಗೌಪ್ಯವಾಗಿಡಲಾಗುತ್ತದೆ ಮತ್ತು ಆ ಪ್ರದೇಶದ ಬೀಟ್ ಸಿಬ್ಬಂದಿಗೆ ಮಾತ್ರ ರಾತ್ರಿ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ರಾತ್ರಿ ಕರ್ತವ್ಯದ ಸಿಬ್ಬಂದಿ ನಸುಕಿನ ಜಾವ 1 ರಿಂದ ಬೆಳಿಗ್ಗೆ 5 ಗಂಟೆಯ ನಡುವೆ ಕನಿಷ್ಠ ಎರಡು ಬಾರಿ ನಿಮ್ಮ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಈ ಅವಧಿ ಕಳ್ಳತನ ಪ್ರಕರಣಗಳು ನಡೆಯುವ ಸಮಯ. ಈ ಹಿನ್ನೆಲೆಯಲ್ಲಿ ಲಾಕ್ ಆಗಿರುವ ಮನೆಗಳ ಮೇಲೆ ಪೊಲೀಸರು ನಿಗಾ ವಹಿಸಿ ಕಳ್ಳತನದಂತಹ ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸುತ್ತಾರೆ.
ಈ ಮೂಲಕ ನಗರಗಳಲ್ಲಿ ಕಳ್ಳತನ ಪ್ರಕರಣಗಳನ್ನು ತಪ್ಪಿಸುವುದು ಪೊಲೀಸ್ ಇಲಾಖೆಯ ಹೊಸ ವ್ಯವಸ್ಥೆಯ ಕ್ರಮವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೆನ್ನಲೇ ಪೊಲೀಸ್ ಇಲಾಖೆ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಆರಂಭಿಸಿದ್ದು, ಸಾರ್ವಜನಿಕರು ಈ ನೂತನ ಸುರಕ್ಷತಾ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.


