ಬೆಳಗಾವಿ : ಅನೇಕ ವರ್ಷಗಳಿಂದ ಲೀವರ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಯಾದಗಿರಿಯ ೪೭ ವರ್ಷದ ವ್ಯಕ್ತಿಯೋರ್ವನಿಗೆ ಲೀವರ ಕಸಿ ಮಾಡುವದರ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡುವದಲ್ಲದೇ, ಉತ್ತರ ಕರ್ನಾಟಕದಲ್ಲಿಯೇ ಹದಿನಾರ(೧೬)ನೇ ಯಶಸ್ವಿ ಯಕೃತ್ತಿ (ಲೀವರ)ನ ಕಸಿ ಮಾಡುವಲ್ಲಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.
ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸವನ ಬಾಗೇವಾಡಿಯ ನಿವಾಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಾಲಕ ೪೫ ವರ್ಷದ ಬಸಪ್ಪ ಹೊನವಾಡ ಅವರ ಮೆದುಳು ನಿಷ್ಕ್ರೀಯಗೊಂಡು, ತನ್ನ ಕರ್ಯವನ್ನು ನಿಲ್ಲಿಸಿದಾಗ ಕುಟುಂಬ ಸದಸ್ಯರೊಂದಿಗೆ ಆಪ್ತಸಮಾಲೋಚನೆ ಮಾಡಿದಾಗ ಲೀವರ ದಾನ ಮಾಡಿದರು. ದಾನ ಮಾಡಿದ ಯಕೃತ(ಲೀವರ)ನ್ನು ಗ್ಯಾಸ್ಟೊಎಂಟ್ರಾಲಾಜಿ ಮತ್ತು ಹೆಪಟಾಲಾಜಿ ಹಿರಿಯ ತಜ್ಞವೈದ್ಯರಾದ ಡಾ. ಸಂತೋಶ ಹಜಾರೆ ಅವರ ನೇತೃತ್ವದಲ್ಲಿ ಶಸ್ತçಚಿಕಿತ್ಸಾ ತಜ್ಞವೈದ್ಯರಾದ ಡಾ. ಸುದರ್ಶನ ಚೌಗಲಾ ಅವರು ಯಶಸ್ವ್ವಿ ಶಸ್ತçಚಿಕಿತ್ಸೆ ನೆರವೇರಿಸಿದರು
ಯಕೃತ ಕಸಿ ಮಾಡಿಸಿಕೊಂಡು ವ್ಯಕ್ತಿಯು ಈಗ ಸಂಪೂರ್ಣ ಗುಣಮುಖಗೊಂಡು ಆಸ್ಪತ್ರೆಯಿಂದ ಮರಳಿ ಮನೆಗೆ ತೆರಳುತ್ತಿದ್ದಾರೆ. ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹಾಗೂ ಲಿವರ ಕಸಿ ಕೇಂದ್ರವಾಗಿ ಉತ್ತರ ಕರ್ನಾಟಕ, ಮಹಾರಾಷ್ಟತರ ಹಾಗೂ ಗೋವಾ ರಾಜ್ಯಗಳ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದೆ. ಕೇವಲ ಮೆಟ್ರೊ ನಗರಗಳಿಗೆ ಸೀಮಿತವಾಗಿದ್ದ ಲೀವರ ಕಸಿ ಶಸ್ತ್ರಚಿಕಿತ್ಸೆಗಳನ್ನು ಅವಶ್ಯವಿರುವ ರೋಗಿಗಳಿಗೆ ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ. ಮೆದುಳು ನಿಷ್ಕಿçÃಯಗೊಂಡ ವ್ಯಕ್ತಿಯು ಲೀವರನೊಂದಿಗೆ, ನೇತ್ರ ಹಾಗೂ ಕಿಡ್ನಿ ದಾನ ಮಾಡಿದರು ಎಂದು ಹಿರಿಯ ಗ್ಯಾಸ್ಟೊçಎಂಟ್ರಾಲಾಜಿಸ್ಟ ಡಾ. ಸಂತೋಷ ಹಜಾರೆ ಅವರು ಹೇಳಿದ್ದಾರೆ.
ಯಶಸ್ವಿ ಯಕೃತ ಕಸಿ ನೆರವೇರಿಸಿದ ಆಸ್ಪತ್ರೆಯ ವೈದ್ಯರ ತಂಡ ಹಾಗೂ ಲೀವರ ದಾನಿಯ ಕುಟುಂಬವನ್ನು ಕೆಎಲ್ಇ ಸಂಸ್ಥೆಯ ಕರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
The 16th liver transplant surgery was performed at KLES Hospital recently. Giving details of this surgery Dr. Santosh Hajare chief Hepatologist informed that Mr Basappa G Honwad age 45 years, a KSRTC employee from Basavan Bagewadi after a road traffic accident, was admitted to KLES hospital and declared brain dead by the treating doctors. His family graciously came forward to donate his organs. His liver was transplanted to a registered 47 Years old patient from Yadgir. Post-transplant the patient is doing well and soon will be discharged says Dr. Sudarshan Chaugale Liver Transplant surgeon at KLES Hospital.
Dr Prabhakar Kore Chairman of KLES Society and Dr. (col) M Dayananda Medical Director KLES Dr.PK Hospital have congratulated the team of doctors and other medical professionals involved in the transplant. Dr. Kore mentioned that as families of brain-dead patients are coming forward voluntarily to donate the organs of their loved ones it is very heartening to see many deserving patients are getting a new lease of life.