ಬೆಳಗಾವಿ: ಬೆಳಗಾವಿಯ ಅಬಕಾರಿ ಇಲಾಖೆ ಅಧಿಕಾರಿಗಳು ಮಹತ್ವದ ಕಾರ್ಯಾಚರಣೆ ನಡೆಸಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಕಂಟೇನರ್ ನಲ್ಲಿ ಸಾಧಿಸುತ್ತಿದ್ದ ಸುಮಾರು 49 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಮಂಗಳವಾರ ಬೆಳಗಿನ ಜಾವ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯ ಖಾನಾಪುರ ತಾಲೂಕು ಕಣಕುಂಬಿ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ಮಾಡಲಾಗಿದೆ. ಕಸದ ತೊಟ್ಟಿಗಳ ಮಾದರಿಯಲ್ಲಿ ಸಾಗಿಸುತ್ತಿರುವುದನ್ನು ಗಮನಿಸಿದಾಗ, ಸುಮಾರು 255 ಮದ್ಯದ ಬಾಟಲಿಗಳ ಬಾಕ್ಸ್ ಪತ್ತೆಯಾಗಿವೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ವಾಹನ ಚಾಲಕ ಪರಾರಿಯಾಗಿದ್ದಾನೆ ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ತಿಳಿಸಿದ್ದಾರೆ.
ಗೋವಾದಿಂದ ಸಾಗಿಸುತ್ತಿದ್ದ 49 ಲಕ್ಷ ರೂ. ಮದ್ಯ ವಶ
