ಬೆಳಗಾವಿ :
ಕೆಎಲ್ಇ ಸೊಸೈಟಿಯ ಲಿಂಗರಾಜ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿಯ ಎಕ್ಸ್ಪರ್ಟ್ ಸೈನ್ಸ್ ಮತ್ತು ಕಾಮರ್ಸ್ ಪಿಯು ಕಾಲೇಜಿನ ಸಹಯೋಗದೊಂದಿಗೆ ಬೆಳಗಾವಿಯ ಪದವಿಪೂರ್ವ ಶಿಕ್ಷಣ ಇಲಾಖೆಯು ಆಯೋಜಿಸಿದ್ದ ಜಿಲ್ಲಾಮಟ್ಟದ ಅಥ್ಲೆಟಿಕ್ ಮೀಟ್ ನಲ್ಲಿ ವಿಜೇತರಾಗಿ ರಾಜಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಿ. ಶಿವಮಣಿ ಅವರು ವಿಜೇತರಾಗಿದ್ದಾರೆ. ಹ್ಯಾಮರ್ ಥ್ರೋನಲ್ಲಿ ೧ನೇ ಸ್ಥಾನ, ಜಾವೆಲಿನ್ ನಲ್ಲಿ ೨ನೇ ಸ್ಥಾನ ಮತ್ತು ಡಿಸ್ಕಸ್ ಥ್ರೋನಲ್ಲಿ ೩ನೇ ಸ್ಥಾನ; ವಿನೋದ್ ಎಸ್ ಶಾಟ್ ಪುಟ್ನಲ್ಲಿ ೧ನೇ ಸ್ಥಾನ ಪಡೆದರು; ಭೂಷಣ್ ಪಾಟೀಲ್ ೨೦೦ ಮೀಟರ್ಸ್ ಮತ್ತು ೪೦೦ ಮೀಟರ್ಸ್ ಹರ್ಡಲ್ಸ್ ನಲ್ಲಿ ತಲಾ ೧ನೇ ಸ್ಥಾನ ಮತ್ತು ೧೧೦ ಮೀಟರ್ಸ್ ಹರ್ಡಲ್ಸ್ ನಲ್ಲಿ ೨ನೇ ಸ್ಥಾನ ಪಡೆದರು. ಸ್ಪೃಹಾ ನಾಯಕ್ ಹ್ಯಾಮರ್ ಥ್ರೋನಲ್ಲಿ ೧ ನೇ ಸ್ಥಾನ ಮತ್ತು ಜಾವೆಲಿನ್ ಥ್ರೋನಲ್ಲಿ ೩ ನೇ ಸ್ಥಾನ ಪಡೆದರು; ಪವನ್ ಕುಮಾರ್ ಡಿಸ್ಕಸ್ ಥ್ರೋನಲ್ಲಿ ೧ನೇ ಸ್ಥಾನ ಪಡೆದರು; ಶಾಟ್ಪುಟ್ನಲ್ಲಿ ಸೌರಭಾ ಪಾಟೀಲ್ ೩ನೇ ಸ್ಥಾನ; ವೆಂಕಟೇಶ್ ಬಿ ೮೦೦ ಮೀಟರ್ಸ್ ಹರ್ಡಲ್ಸ್ ನಲ್ಲಿ ೨ನೇ ಸ್ಥಾನ ಹಾಗೂ ವರದಾ ಕಾಸರ್ ೧೦೦ ಮೀಟರ್ಸ್ ಹರ್ಡಲ್ಸ್ ನಲ್ಲಿ ೨ನೇ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಪದವಿ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಪಿಯು ಪ್ರಾಚಾರ್ಯೆ ಗಿರಿಜಾ ಹಿರೇಮಠ, ದೈಹಿಕ ನಿರ್ದೇಶಕ ಡಾ.ಸಿ.ರಾಮರಾವ್ ಅಭಿನಂದನೆ ಸಲ್ಲಿಸಿದ್ದಾರೆ.