ಚಿಕ್ಕೋಡಿ: ನಿಮ್ಮ ಮರ್ಯಾದೆ ನಿವು ಕಾಪಾಡಿಕೊಳ್ಳಿ ನಮ್ಮ ಮರ್ಯಾದೆ ನಾನು ಕಾಪಾಡಿಕೊಳ್ಳುತ್ತೇನೆ ಎಂದು ಶಾಸಕ ಲಕ್ಷ್ಮಣ ಸವದಿ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಪ್ರತ್ಯುತ್ತರ ನೀಡಿದರು.
ಶುಕ್ರವಾರ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಗೆ ಹಿನ್ನೆಲೆ ಸಭೆಯಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ನಯವಾಗಿ ಗುಡುಗಿದ ಸವದಿ, ಮನಸಿಗೆ ನೋವು ಆಗುವ ರೀತಿಯಲ್ಲಿ ಗೋಕಾಕ ಶಾಸಕರು ಮಾತನಾಡಬೇಡಿ.ರಮೇಶ್ ಜಾರಕಿಹೊಳಿಗೆ ವಿನಯಪೂರ್ವಕವಾಗಿ ಸವದಿ ಮನವಿ ಮಾಡಿದರು.
ರಮೇಶ್ ಜಾರಕಿಹೊಳಿ ಅವರಿಗೆ ಸರಿಯಾಗಿ ಡ್ರೈವಿಂಗ್ ಬರುದಿಲ್ಲ. ನಾನು ಕಳೆದ ಇಪ್ಪತ್ತು ವರ್ಷಗಳಿಂದ ಯಾವುದೇ ದೋಕಾ ಮಾಡಿಲ್ಲ.ಇಲ್ಲಿ ಯಾರೂ ಒಳ್ಳೆಯ ಡ್ರೈವರ್ ಎಂದು ನೀವು ತಿರ್ಮಾನ ಮಾಡಿ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಅನಪಡ ಡ್ರೈವರ್ ಎಂದರು.
ಅಥಣಿ ಕೃಷ್ಣ ಸಕ್ಕರೆ ಕಾರ್ಖಾನೆ ಬಗ್ಗೆ ಪ್ರಶ್ನೆ ಮಾಡುವ ರಮೇಶ್ ಸಾಹುಕಾರ. ಯಾಕೆ ಘಟಪ್ರಭಾ ಸಕ್ಕರೆ ಕಾರ್ಖಾನೆ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅಥಣಿಗೆ ಬಂದು ಗೊಳ್ಳು ಹೇಳುವುದು ಅಲ್ಲ, ಕಳೆದ ಇಪ್ಪತೈದು ವರ್ಷದಲ್ಲಿ ನಾನು ಯಾವುದೇ ದ್ವೇಷದ ರಾಜಕಾರಣ ಮಾಡಿಲ್ಲ. ನಿಮ್ಮ ತರಾ ನಾನು ಯಾವುದೇ ಪೊಲೀಸ್ ಠಾಣಾ ಬಳಸಿ ರಾಜಕಾರಣ ಮಾಡಿಲ್ಲ. ಪರೋಕ್ಷವಾಗಿ ಗೋಕಾಕ್ ದ್ವೇಷದ ರಾಜಕೀಯ ಬಗ್ಗೆ ಸವದಿ ಲೇವಡಿ ಮಾಡಿದರು.
ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಹಣವನ್ನು ಸವದಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಕ್ಕೆ ನಾನು ಮೌನವಾಗಿದ್ದರೆ , ಜನರಲ್ಲಿ ಗೊಂದಲಾಗುತ್ತದೆ. ರಮೇಶ್ ಜಾರಕಿಹೊಳಿ ಇದೇ ವೇದಿಕೆಯಲ್ಲಿ ನಿಂತು ನನ್ನ ಮೇಲೆ ಆರೋಪ ಮಾಡಿದ್ದಾರೆ.ಈ ಕಾರ್ಖಾನೆಯಿಂದ ನಾನು 10 ರೂ.ತಿಂದಿಲ್ಲ, ಏನಾದರೂ ತಿಂದಿದ್ದರೆ ನನ್ನ ತಾಯಿಯ ಸೆರಗಿಗೆ ನಾನು ಕೈಯ ಹಾಕಿದ ರೀತಿಯಲ್ಲಿ ಆಗುತ್ತದೆ. ನಾನು ಏನು ಭ್ರಷ್ಟಾಚಾರ ಮಾಡಿಲ್ಲ. ಮಾಡಿದರೆ ನನ್ನ ಸ್ವಾಭಿಮಾನಕ್ಕೆ ನಾನೆ ಅಪಚಾರ ಮಾಡಿಕೊಂಡಂತೆ ಎಂದರು.ರಮೇಶ್ ಜಾರಕಿಹೊಳಿ ಆರೋಪಕ್ಕೆ ಸವದಿ ಮಾರ್ಮಿಕವಾಗಿ ಪ್ರತ್ಯುತ್ತರ ನೀಡಿದರು.


