ಬೆಳಗಾವಿ : ಕೃಷಿ ಇಲಾಖೆಯ ‘ಬೆಳೆ ಸಮೀಕ್ಷೆ’ ನನ್ನ ಬೆಳೆ ನನ್ನ ಹಕ್ಕು ಎಂಬ ಮಾಹಿತಿ ಪೋಸ್ಟರ್ ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಿಡುಗಡೆಗೊಳಿಸಿದರು.
ಗೃಹಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ ಸಚಿವರು ರೈತರಿಗೆ ಸರಿಯಾದ ಮಾಹಿತಿ, ಮಾರ್ಗದರ್ಶನ ನೀಡುವಂತಹ ಕೆಲಸವನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಚ್.ಡಿ.ಕೋಳೆಕರ್, ಸಹಾಯಕ ಕೃಷಿ ನಿದೇಶಕ ಎಂ.ಎಸ್.ಪಟಗುಂದಿ ಉಪಸ್ಥಿತರಿದ್ದರು.