2026 ಕ್ಕೆ ಅಗಸಗಿ ಲಕ್ಷ್ಮೀ ದೇವಿ ಜಾತ್ರೆ ..?
ಕೋಣ- ಮೇಕೆ ಬಿಟ್ಟು ಜಾತ್ರೆಗೆ ಅದ್ದೂರಿ ಸಿದ್ದತೆ..!
ದಲಿತರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಕೋಣ- ಮೇಕೆ ಬಿಡುವ ಕಾರ್ಯಕ್ರಮ..!
ಬೆಳಗಾವಿ: ಅಗಸಗಿ ಗ್ರಾಮದೇವಿ ಶ್ರೀ ಲಕ್ಷ್ಮೀದೇವಿ ಜಾತ್ರೆಯ ಕೋಣ ಹಾಗೂ ಗಂಡು ಮೇಕೆ ಬಿಡುವ ಕಾರ್ಯಕ್ರಮ ನಿನ್ನೆ ಅದ್ದೂರಿಯಾಗಿ ನಡೆಯಿತು.
ನಿಗದಿಪಡಿಸಿದಂತೆ 11ವರ್ಷಕ್ಕೆ ಆಗಬೇಕಿದ್ದ ಜಾತ್ರೆ ನಾನಾ ಕಾರಣಾಂತರಗಳಿಂದ 7 ವರ್ಷ ತಡವಾಗಿತ್ತು. ಈಗ ಬಹುಪಾಲು ಜನರ ಆಶಯದಂತೆ ಬಹುಶಃ ಮುಂದಿನ ವರ್ಷ ಜಾತ್ರೆಯಾಗಿ 18 ವರ್ಷಗಳು ಪೂರೈಸುವ ಮುನ್ನ ಲಕ್ಷ್ಮಿ ದೇವಿ ಜಾತ್ರೆ ಮಾಡುವುದಾಗಿ ಗ್ರಾಮದ ಎಲ್ಲ ಸಮುದಾಯದವರು ಒಕ್ಕೂರೊಲಿನಿಂದ ಒಪ್ಪಂದಕ್ಕೆ ಬಂದರು. ನಿನ್ನೆ (ಮಂಗಳವಾರ) ಜಾತ್ರೆಯ ಪೂರ್ವ ಸಿದ್ದತೆ ನಿಯಮವಾಗಿ ಕೋಣ ಹಾಗೂ ಗಂಡು ಮೇಕೆ ಬಿಟ್ಟು ತಯಾರಿಗೆ ಸಜ್ಜಾದರು.
ನಿಯಮದಂತೆ ದಲಿತ ಸಮುದಾಯದ ಎಲ್ಲ ಜನ ಉತ್ಸಾಹ ಮತ್ತು ಹುರುಪಿನಿಂದ ಬಂದು ತಮ್ಮ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೆ ಎಲ್ಲ ಸಮುದಾಯದ ಜನ ಇಮ್ಮಡಿ ಉತ್ಸಾಹ ತೋರಿಸಿದರು.
ಊರೆಲ್ಲ ಮೆರವಣಿಗೆ, ಭಂಡಾರಮಯವಾದ ಗ್ರಾಮ..!
ಕೋಣ-ಮೇಕೆ ಬಿಡುವಾಗ ಅವುಗಳನ್ನು ಊರೆಲ್ಲ ತಿರುಗಿಸಿ ಭಂಡಾರ ಹಚ್ಚುವ ಸಂಪ್ರದಾಯ. ಆದರೆ ಮುಂದಿನ ವರ್ಷದ ಜಾತ್ರೆಯ ಉತ್ಸಾಹಲ್ಲಿರುವ ಭಕ್ತರು ನಿನ್ನೆ ಸಂಪೂರ್ಣ ಗ್ರಾಮವನ್ನು ಭಂಡಾರದ ಬಣ್ಣಕ್ಕೆ ತಿರುಗಿಸಿದರು. ನೂರಾರು ಭಂಡಾರ ಚೀಲಗಳನ್ನು ತಂದ ಅಗಸಗಿ ಹಾಗೂ ಚಲವೇನಟ್ಟಿ ಗ್ರಾಮದ ಹಿರಿಯರು, ವಯಸ್ಕರು, ಮಹಿಳೆಯರು, ಮಕ್ಕಳು ಸೇರಿ ಎಲ್ಲರು ಭಂಡಾರು ಹಾರಿಸುತ್ತ ಡೋಳ್ಳು ಹಾಗೂ ಸಂಗೀತ ವಾದ್ಯಗಳಿಗೆ ಸಾಂಪ್ರದಾಯಿಕ ಹೆಜ್ಜೆ ಹಾಕಿ ಸಂಭ್ರಮಿಸಿದರು. ಪ್ರಮುಖ ಗಲ್ಲಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಕಲಗೌಡ ಪಾಟೀಲ, ಗೌಡಪ್ಪ ಪಾಟೀಲ, ಬಸನಗೌಡ ಪಾಟೀಲ, ಸಿದ್ದಲಿಂಗ ಮುದ್ದಣ್ಣವರ ಹಾಗೂ ಬಡಿಗೇರ, ಮೇತ್ರಿ, ಕೊಲಕಾರ, ಕಾಂಬಳೆ ಮತ್ತು ಸುಣಗಾರ ಮನೆತನದವರು ನೇತೃತ್ವ ವಹಿಸಿದ್ದರು. ಗ್ರಾ ಪಂ ಅಧ್ಯಕ್ಷ ಅಮೃತ ಮುದ್ದಣ್ಣವರ, ಸದಸ್ಯರಾದ ಅಪ್ಪಯ್ಯಗೌಡ ಪಾಟೀಲ, ಬೈರು ಕಂಗ್ರಾಳಕರ, ಗುಂಡು ಕುರಿ, ಲಗಮಾ ಸನದಿ ಸೇರಿ ಎಲ್ಲ ಸದಸ್ಯರು ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, PKPS ಗೌಡಪ್ಪಾ ರುದ್ರಗೌಡ ಪಾಟೀಲ, ಮುಖಂಡರಾದ ಲಕ್ಷ್ಮಣ ಕಂಗ್ರಾಳಕರ, ಪರಶರಾಮ ಮೇತ್ರಿ, ಅಪ್ಪಯ್ಯಾ ಕೋಲಕಾರ, ವಿಲಾಸ ಪಾಟೀಲ, ರಾಹುಲ್ ಜಾಧವ, ವಿಠ್ಠಲ ಕೊಳಿ, ಜ್ಯೋತಿಭಾ ಘೇವಡಿ, ಕೆಂಪಣ್ಣಾ ಚುನಾರಿ, ಸಂತೋಷ ಲಾಡ, ನಂದು ಚಲವೇಟಕರ, ರಾಹುಲ ರೇಡೆಕರ ಸೇರಿದಂತೆ ಅಗಸಗಿ ಹಾಗೂ ಚಲವೆನಟ್ಟಿ ಗ್ರಾಮದ ಸಾವಿರಾರು ಭಕ್ತರು ಪಾಲ್ಗೊಂಡು ಅದ್ದೂರಿಯಾಗಿ ಮುಂದಿನ ವರ್ಷದ ಜಾತ್ರಾ ಸಿದ್ದತೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದರು.