ಬೆಳಗಾವಿ : ಖಾನಾಪುರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಯುವಕರಿಗೆ ತಾಂತ್ರಿಕ ಶಿಕ್ಷಣವನ್ನು ಸುಲಭವಾಗಿ ಒದಗಿಸುವ ಹಾಗೂ ಅವರಲ್ಲಿ ಉತ್ತಮ ನೈಪುಣ್ಯತೆ ಮತ್ತು ವಿಶಿಷ್ಟ ಕೌಶಲ್ಯಗಳನ್ನು ತುಂಬುವ ದೃಷ್ಟಿಯಿಂದ ಲೋಕಮಾನ್ಯ ಎಜುಕೇಶನ್ ಸೊಸೈಟಿ ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಯುಕ್ತ ಲೋಕಮಾನ್ಯ ಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ, ನೂತನವಾಗಿ ನಿರ್ಮಾಣಗೊಂಡ ಶ್ರೀ ವಿಠ್ಠಲರಾವ್ ಯಶವಂತರಾವ್ ಚವಾಣ್ ಪಾಲಿಟೆಕ್ನಿಕ್ ಅನ್ನು ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಹಳಿಯಾಳ ಮತಕ್ಷೇತ್ರದ ಶಾಸಕ ಆರ್. ವಿ. ದೇಶಪಾಂಡೆ, ಸೊಸೈಟಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಕಾರ್ಯದರ್ಶಿಗಳು, ವಿಟಿಯು (VTU) ಹಾಗೂ ಆರ್.ಸಿ.ಯು (RCU) ನ ಉಪಕುಲಪತಿಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.