ಬೆಳಗಾವಿ: ಕೆ.ಎಲ್.ಎಸ್ ಸಂಸ್ಥೆಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಭಾನುವಾರ ಇಂಡಕ್ಷನ್ ಕಾರ್ಯಕ್ರಮವನ್ನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಲಾಯಿತು.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ, ನ್ಯಾಯಮೂರ್ತಿ ಸಿ. ಎಂ. ಜೋಶಿ ಮಾತನಾಡಿ, ತಂತ್ರಜ್ಞಾನದ ಮಹತ್ವ ಮತ್ತು ಅದರ ಕಾನೂನು ವೃತ್ತಿಯ ಬಳಕೆಯನ್ನು ವಿವರಿಸಿದರು. ಓದು ಮತ್ತು ಡ್ರಾಫ್ಟಿಂಗ್ ಕೌಶಲ್ಯಗಳ ಮೇಲೆ ಗಮನಹರಿಸಲು ಸಲಹೆ ನೀಡಿದರು. ವಿದ್ಯಾರ್ಥಿಗಳು ಸೃಜನಾತ್ಮಕ ಮನಸ್ಸುಳ್ಳವರಾಗಿರಬೇಕು ಮತ್ತು ಸಮಯದ ಸರಿಯಾದ ಉಪಯೋಗ ಮಾಡಬೇಕು ಎಂದು ಹೇಳಿದರು.
ನ್ಯಾಯವಾದಿ ಎ. ಕೆ. ಠಗಾರೆ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು ಮತ್ತು ಕಾಲೇಜಿನ ಸಂಪನ್ಮೂಲಗಳನ್ನು ಪೂರ್ಣವಾಗಿ ಉಪಯೋಗಿಸಲು ಸಲಹೆ ನೀಡಿದರು.
ನ್ಯಾಯವಾದಿ ಪಿ. ಎಸ್. ಸಾವಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕಾಲತ್ತಿನಲ್ಲಿ ಸಂವಹನ ಕೌಶಲ್ಯದ ಮಹತ್ವದ ಬಗ್ಗೆ ಹೇಳಿದರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಅತ್ಯಂತ ಮುಖ್ಯವಿದೆ ಎಂದು ವಿವರಿಸಿದರು.
ಪ್ರಾಂಶುಪಾಲ ಡಾ. ಎ. ಎಚ್. ಹವಾಲ್ದಾರ್, ವಿದ್ಯಾರ್ಥಿ ಸಮಿತಿಯ ಸದಸ್ಯರಾದ ತನ್ಮಯ್ , ನೇತ್ರಾವತಿ, ಭೂಮಿಕಾ, ನಾಗಶ್ರೀ, ಸಹನಾ, ಚಂದ್ರಲೇಖ — ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.
ನ್ಯಾಯವಾದಿ ಆರ್. ಎಸ್. ಮುತಾಲಿಕ್ ಸ್ವಾಗತಿಸಿ ಆರ್. ಎಲ್. ಲಾ ಕಾಲೇಜು ವಿದ್ಯಾರ್ಥಿಗಳ ಸಾಧನೆಗಳನ್ನು ವಿವರಿಸಿದರು . ಡಾ. ಸಮೀನಾ ಎನ್. ಬೇಗ್ ವಂದಿಸಿದರು. ಸುನುದಿ ಜೋಶಿ ನಿರೂಪಿಸಿದರು.


