ಸರ್ಕಾರಿ ನೌಕರಿ ಕೊಡಿಸುವುದಾಗಿ ಯುವಕರಿಗೆ ವಂಚನೆ ..!
67 ಲಕ್ಷ ರೂ ಪಂಗನಾಮ ಹಾಕಿ ಪರಾರಿಯಾಗಿದ್ದ ಲಪಂಗ ರಾಜಾನನ್ನು ಬಂಧಿಸಿದ ಡಿಸಿಪಿ & ಟೀಂ.
ಬೆಳಗಾವಿ : ಲಕ್ಷಾಂತರ ರೂ ಹಣ ಕೊಟ್ಟರೆ ನಿಮಗೆ ನೇರವಾಗಿ ಸರಕಾರಿ ನೌಕರಿ ಕೊಡಿಸುತ್ತೇನೆ ಎಂದು ಹೇಳಿ 10 ಜನ ಯುವಕರಿಗೆ ಲಕ್ಷಾಂತರ ರೂ ಪಂಗನಾಮ ಹಾಕಿ ಕಣ್ಮರೆಯಾಗಿದ್ದ ಖತರನಾಕ ಖದಿಮನನ್ನು ಡಿಸಿಪಿ ಸ್ನೇಹಾ ಪಿ ವಿ ನೇತೃತ್ವದಲ್ಲಿ ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯರನಾಳ ಗ್ರಾಮದ ರಾಜು ಶ್ರೀಮಂತ ಪಾಟೀಲ ಎಂಬಾತನೇ ಬಂಧಿತ ಲಪಂಗ ಆರೋಪಿ.
ಈತ ಮೊದಲಿಗೆ ರೇಲ್ವೆ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ಇಲ್ಲಿನ ಕೊಂಡಸಕೊಪ್ಪ ಗ್ರಾಮದ 29 ವರ್ಷದ ನಾಗರಾಜ ಅಶೋಕ ಪಾಟೀಲ ಎಂಬಾತನಿಗೆ ನಕಲು ಆದೇಶ ಪತ್ರ ನೀಡಿ 4 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಪಂಗನಾಮ ಹಾಕಿದ್ದ. ನಂತರ ಈತನಿಂದಾದ ವಂಚನೆ ಅರಿತುಕೊಂಡ ನಾಗರಾಜ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಲಪಂಗ ರಾಜಾ ಇತನೊಬ್ಬನಿಗೆ ಮೋಸ ಮಾಡಿದ್ದಲ್ಲದೇ, ಬೇರೆ ಬೇರೆ ತಾಲೂಕು ಹಾಗೂ ಜಿಲ್ಲೆಗಳ ಯುವಕರಾದ..
1) ಸಂಗಪ್ಪ ಭರಮಪ್ಪಾ ದಳವಾಯಿ, ಸಾ: ಕುಳ್ಳೂರ
2) ಜಗದೀಶ ಸೋಮಲಿಂಗಪ್ಪ ತಡಸಲೂರ, ಲೋಕಾಪೂರ
3) ಮಂಜುವಾಗ ರಂಗಪ್ಪ ಮಳಲಿ ಸಾ: ಮುಧೋಳ
4) ಮೈಲಾರ ಬಸಪ್ಪ ಗಡ್ಡಿ ಸಾ: ರಾಮದುರ್ಗ
5) ಸುರೇಶ ಸದಾಶಿವ ಕೋಟೆ ಸಾ: ಗೋಕಾಕ
6) ಮಹೇಶ ಹಣಮಂತ ವಗ್ಗನ್ನವರ ಸಾ: ಲೋಕಾಪೂರ
7) ಸಂತೋಷ ಒಂಟಿ ಸಾ: ಮುಧೋಳ
8), ರಾಘವೇಂದ್ರ ಬಸವರಾಜ ಬೆಟಗೇರಿ ಸಾ: ಗೋಕಾಕ
9) ಈಶ್ವರ ಬಸವರಾಜ ವಗ್ಗನ್ನವರ ಸಾ॥ ಲೋಕಾಪೂರ ಎಂಬುವರು ವಂಚನೆಗೊಳಗಾದ ಯುವಕರು.
ಈ ಪ್ರತಿಯೊಬ್ಬರ ಕಡೆಯಿಂದ 6 ಲಕ್ಷ ರೂಪಾಯಿ ಹಣ ಪಡೆದಿದ್ದ ಲಪಂಗ ರಾಜಾ ಸರ್ಕಾರಿ ನೌಕರಿ ಕೂಡಿಸದೇ, ಪಡೆದ ಹಣವನ್ನು ಮರಳಸದೇ, ನಂಬಿಕೆ ದ್ರೋಹ ಮಾಡಿ ಒಟ್ಟು ಎಲ್ಲರ ಕಡೆಯಿಂದ 67 ಲಕ್ಷ ರೂಪಾಯಿ ಪಡೆದು ಪಂಗನಾಮ ಹಾಕಿ ಮಾರ್ಚ ತಿಂಗಳಿನಿಂದ ಪರಾರಿಯಾಗಿದ್ದ ಈ ಲಪಂಗ.
ಅಂದು ಈ ಪ್ರಕರಣವನ್ನು ದಾಖಲಿಸಿಕೊಂಡು ಗಂಭೀರವಾಗಿ ಪರಿಗಣಿಸಿ ತಿವ್ರ ತನಿಖೆ ಕೈಗೊಂಡಿದ್ದ ಪೊಲೀಸ ಆಯುಕ್ತ ಬೋರಲಿಂಗಯ್ಯ ಹಾಗೂ ಡಿಸಿಪಿ ಸ್ನೇಹಾ ಪಿ ವಿ ನೇತೃತ್ವದಲ್ಲಿ ಪಿಐ ಶ್ರೀನಿವಾಸ ಹಂಡ ಪಿಎಸ್ಐ ಲಕ್ಕಪ್ಪಾ ಜುಡಟ್ಟಿ ಒಳಗೊಂಡ ತಂಡ ಈ ಲಪಂಗ ರಾಜಾನನ್ನು ಹುಡುಕಿ ತೆಗೆದಿದ್ದಾರೆ. ಇತನ ವಿರುದ್ಧ ಐಪಿಸಿ 420 ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಿ ಹೆಚ್ಚಿನ ತನಿಖೆ ಕೈಕೊಂಡಿದ್ದಾರೆ.