ಬೆಳಗಾವಿ : ಖಾನಾಪುರ ಪದವಿ ಕಾಲೇಜಿನ ಭೂಮಿಪೂಜೆ ಸೆ. 12 ರಂದು ಬೆಳಗ್ಗೆ 10:30 ಕ್ಕೆ ಖಾನಾಪುರದ ಜಾಂಬೋಟಿ ಕ್ರಾಸ್ ಬಳಿ ಹಾಗೂ ಬೀಡಿ ಗ್ರಾಮದ ನೂತನ ಪದವಿ ಮಹಾವಿದ್ಯಾಲಯ ಕಟ್ಟಡದ ಭೂಮಿ ಪೂಜೆ ಸೆ.12 ರಂದು ಮಧ್ಯಾಹ್ನ 12 ಕ್ಕೆ ನಡೆಯಲಿದೆ.
ಶಾಸಕ ವಿಠ್ಠಲ ಹಲಗೇಕರ ಭೂಮಿಪೂಜೆ ನೆರವೇರಿಸುವರು. ಶಾಸಕ ವಿಠ್ಠಲ ಹಲಗೇಕರ ಅವರ ಶಾಸಕರ ನಿಧಿಯಿಂದ ಎರಡು ಕೋಟಿ 80 ಲಕ್ಷ ರೂಪಾಯಿ ಮಂಜೂರಾಗಿದೆ. ಇದರಲ್ಲಿ ಖಾನಾಪುರ ಪದವಿ ಮಹಾವಿದ್ಯಾಲಯಕ್ಕೆ ಒಂದು ಕೋಟಿ ಇಪ್ಪತ್ತು ಲಕ್ಷ ರೂ. ಮತ್ತು ಬೀಡಿ ಪದವಿ ಮಹಾವಿದ್ಯಾಲಯಕ್ಕೆ ಒಂದು ಕೋಟಿ 60 ಲಕ್ಷ ರೂ. ಮಂಜೂರಾಗಿದೆ. ತಾಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ, ಗುಂಡು ತೋಪಿನಕಟ್ಟಿ ಉಪಸ್ಥಿತರಿರುವರು.