ಇನ್ನೂ ಇಂತಹ ಅನೇಕ ನೂರಾರು ಕರಾಮತ್ತುಗಳು ಬೆಳಗಾವಿ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ನಡೆದಿರುವ ಬಗ್ಗೆ ಸ್ಥಳೀಯ ನಾಗರಿಕರು ಅನುಮಾನವನ್ನು ‘ಜನ ಜೀವಾಳ’ ದ ಮುಂದೆ ವ್ಯಕ್ತಪಡಿಸಿದ್ದಾರೆ.
ಭೂ ಮಾಫಿಯಾ ದೊರೆಗಳು ಮತ್ತು ಸಬ್ ರಜಿಸ್ಟಾರ್ ನೋಂದಣಿ ಅಧಿಕಾರಿಗಳ ಕರಾಮತ್ತು, ಮಸಲತ್ತಿನ ಮರ್ಮ ಮುಂಬರುವ ದಿನಗಳಲ್ಲಿ ಹೊರಬರುವುದು ಖಚಿತ ಎಂದು ನೋಂದಣಿ ಏಜೆಂಟರ ಬಾಯಿಂದ ಬಾಯಿಗೆ ಸುದ್ದಿ ಹರಿದಾಡುತ್ತಿದೆ.
ಬೆಳಗಾವಿ :
ನಕಲಿ ದಾಖಲೆ ಸೃಷ್ಟಿಸಿದ ಭೂಗಳ್ಳರು ಕೋಟ್ಯಂತರ ₹ ಅಪಾರ್ಟ್ ಮೆಂಟ್ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಮಾನಸಿಕ ಅಸ್ವಸ್ಥತೆಯ
ಜಾಗವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂ ಬೆಲೆಬಾಳುವ ಆಸ್ತಿಯನ್ನು ಲಪಟಾಯಿಸುವ ಪ್ರಯತ್ನ ಇದೀಗ ಭಾರೀ ಪ್ರಚಾರ ಪಡೆದುಕೊಂಡಿದೆ. ಬಡಪಾಯಿ ಕುಟುಂಬದ
ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಂಡ ಭೂಗಳ್ಳರು ಮನೆಯಲ್ಲಿದ್ದ ಮಾನಸಿಕ ಅಸ್ವಸ್ಥೆಯನ್ನು ಕೆಲ ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಖ್ಯಾತನಾಮ ಆಸ್ಪತ್ರೆಗಳಿದ್ದರೂ ಇಲ್ಲಿ ಚಿಕಿತ್ಸೆ ನೀಡುವುದನ್ನು ಬಿಟ್ಟು ಕಾರವಾರದ ಆಸ್ಪತ್ರೆಗೆ ರವಾನೆ ಮಾಡಿರುವ ಸುದ್ದಿ ಇದೆ.
ಸೋಮವಾರಪೇಟೆ ನಿವಾಸಿ ಅಪರ್ಣ ಮಾಸೇಕರ್ ಮಾನಸಿಕ ಅಸ್ವಸ್ಥೆ. ಇವರು ಸ್ವಂತ ಮನೆಯಲ್ಲಿ ತನ್ನ ತಾಯಿ ಮತ್ತು ತೊಂಬತ್ತು ವರ್ಷ ಅಜ್ಜಿಯೊಂದಿಗೆ ಇದ್ದರು.
ಮನೆಯವರು ಈ ಮಾನಸಿಕ ಅಸ್ವಸ್ಥ ಕುಟುಂಬಕ್ಕೆ ಸಹಾಯಹಸ್ತ ಚಾಚುತ್ತಿರಲಿಲ್ಲ. ಈ ಮಾನಸಿಕ ಅಸ್ವಸ್ಥ ತಾಯಿ ಉಷಾ ವಿಶ್ರಮ್ ಮಾಸೇಕರ್ ಮೇ 2011 ರಂದು ನಿಧನರಾಗಿದ್ದರು. ಅಕ್ಕಪಕ್ಕದವರು ಸಹ ಇವರ ಸಹಾಯಕ್ಕೆ ಆಗಮಿಸಿರಲಿಲ್ಲ. ಆಗ ತಾಯಿಯ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದರು.
ಆಗ ಅಸ್ವಸ್ಥ ಮಹಿಳೆಗೆ ಸಾಮಾಜಿಕ ಕಾರ್ಯಕರ್ತ ಮಾಜಿ ಮೇಯರ್ ವಿಜಯ ಮೋರೆ ನೆನಪಾಗಿದ್ದಾರೆ. ಅವರಿಗೆ ವಿಷಯ ತಿಳಿಸುವಂತೆ ಕೆಲವರ ಬಳಿ ಹೇಳಿದ್ದಾರೆ. ಆಗ ವಿಜಯ ಮೋರೆ ಬಂದು ಗಮನಿಸಿದಾಗ ಮನೆಯಲ್ಲಿ ದುರ್ವಾಸನೆ ಹಬ್ಬಿದ್ದು ವಿಜಯ ಮೋರೆ ಅವರು ಬಾಬುಲಾಲ್ ಮುಜಾವರ ಮುಂತಾದವರ ಜತೆ ಸೇರಿ ಟಿಳಕವಾಡಿ ಪೋಲಿಸರಿಗೆ ಮಾಹಿತಿ ನೀಡಿ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆಗ ಅವರ ಮನೆಯಲ್ಲಿ ಸುಮಾರು ಎಪ್ಪತ್ತೈದರಿಂದ ಎಂಬತ್ತು ಲಕ್ಷ ಮೌಲ್ಯದ ಎಫ್ ಡಿ ಬಾಂಡ್ ಗಳು ಮಾರುತಿ ಕಾರ್ ಸಹ ಪತ್ತೆಯಾಗಿತ್ತು. ಇದು ವ್ಯಾಪಕ ಪ್ರಚಾರ ಪಡೆದಿತ್ತು. ಇದನ್ನು ಗಮನಿಸಿದ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಈಗ ಅಲ್ಲಿ ಬೃಹತ್ ಕಟ್ಟಡ ನಿರ್ಮಿಸುವ ಪ್ರಯತ್ನ ನಡೆಸಿದ್ದಾರೆ. ಈ ಹಿಂದೆಯೂ ಈ ಜಾಗದ ಮೇಲೆ ಬಹಳ ಜನ ಕಣ್ಣಿಟ್ಟಿದ್ದರು.
ಸದ್ಯ ಕಟ್ಟಡ ನಿರ್ಮಾಣದ ನಡುವೆ ಹದಿನೈದು ದಿನಗಳಿಂದ ಕೆಲಸ ಬಂದ್ ಮಾಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಒಟ್ಟಾರೆ ಬೆಳಗಾವಿಯಲ್ಲಿ ಅಬಲರ
ಮೇಲೆ ನಿರಾತಂಕವಾಗಿ ದಬ್ಬಾಳಿಕೆ ಮಾಡಿ ಭೂಗಳ್ಳತನ ಮಾಡುತ್ತಿರುವುದಕ್ಕೆ ಇದಕ್ಕಿಂತ ಅತ್ಯುತ್ತಮ ಉದಾಹರಣೆ ಉದಾಹರಣೆ ಇನ್ನೊಂದಿಲ್ಲ ಎನ್ನಬಹುದು.