ಬೆಳಗಾವಿ : ಜಮೀನು ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಇಲ್ಲಿಯ 11ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ.20,000 ದಂಡ ವಿಧಿಸಿದೆ.
ಬಸಪ್ಪ ದಶವಂತ ಐಗಳಿ ಶಿಕ್ಷೆಗೊಳಗಾದ ಆರೋಪಿ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಳ್ಳಿ ಗ್ರಾಮದ ಶಿವಲಿಂಗಪ್ಪ ಮುರಿಗೆಪ್ಪ ಐಗಳಿ ಅವರನ್ನು ಕೊಲೆ ಮಾಡಲಾಗಿತ್ತು. ಶಿವಲಿಂಗಪ್ಪ ಐಗಳಿ ಮತ್ತು ಬಸಪ್ಪ ಐಗಳಿ ಅವರ ನಡುವೆ ಜಮೀನಿನ ವಿಷಯವಾಗಿ ತಂಟೆ ತಕರಾರು ನಡೆಯುತ್ತಿತ್ತು. ಈ ಸಂಬಂಧ 2021ರ ಜುಲೈ 19ರಂದು ಮಧ್ಯಾಹ್ನ ಹಾಲಳ್ಳಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ಶಿವಲಿಂಗಪ್ಪ ಅವರನ್ನು ಬಸಪ್ಪ ದೊಡ್ಡ ಕಲ್ಲಿನಿಂದ ಜಜ್ಜಿ ಕೊಲೆಗೈದಿದ್ದ. ಈ ಬಗ್ಗೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


