ಬೆಳಗಾವಿ :ಮಾಜಿ ಸಚಿವ ಡಿ.ಬಿ. ಇನಾಮದಾರ ಅವರ ಆರೋಗ್ಯ ಸ್ಥಿತಿ ಬಗ್ಗೆ ಅವರ ಸೊಸೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಡಿ.ಬಿ. ಇನಾಮ್ದಾರ್ ಅವರ ಆರೋಗ್ಯ ಹದಗೆಟ್ಟಿದೆ. ಬೆಂಗಳೂರು ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಳೆ ಎಳೆಯಾಗಿ ವಿವರಿಸುವಾಗ ಕಣ್ಣೀರು ಹಾಕಿದರು.
ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್ ಪಾಟೀಲ ಅವರಿಗೆ ಮಣೆ ಹಾಕಿದೆ. ಆದರೆ ಇದೀಗ ಡಿ.ಬಿ.ಇನಾಮದಾರವರು ಆಸ್ಪತ್ರೆ ಸೇರಿದಾಗಲೇ ಕಿತ್ತೂರು ವಿಧಾನಸಭಾ ಮತಕ್ಷೇತ್ರದಲ್ಲಿ ಬಾಬಾ ಸಾಹೇಬ್ ಪಾಟೀಲ ಅವರಿಗೆ ಟಿಕೆಟ್ ನೀಡಿ ವಂಚಿಸಿದೆ ಎಂದು ಆರೋಪಿಸಿದರು.
ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ. ನಾನು ಕಾಂಗ್ರೆಸ್ ಪಕ್ಷದಿಂದ ದೂರ ಸರಿಯುವ ನಿರ್ಧಾರ ತೆಗೆದುಕೊಂಡಿರುವೆ. ಈಗ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು
ಖಡಾಖಂಡಿತವಾಗಿ ಅವರು ಘೋಷಿಸಿದರು.
40 ರಿಂದ 45 ವರ್ಷಗಳ ಅವಧಿಯಲ್ಲಿ ಇನಾಮದಾರ ಅವರು ರಾಜಕೀಯದಲ್ಲಿದ್ದರು. ಆದರೆ ಕಾಂಗ್ರೆಸ್ ಪಕ್ಷ ಕಿತ್ತೂರು ಮತ ಕ್ಷೇತ್ರಕ್ಕೆ ಟಿಕೆಟ್ ನೀಡುವಲ್ಲಿ ಇನಾಮದಾರವನ್ನು ನಿರ್ಲಕ್ಷ್ಯ ಮಾಡಲಾಗಿದೆ. ಇದೀಗ ವಿಕ್ರಂ ಇನಾಮದಾರ ಅವರು ಎರಡು ದಿನದಲ್ಲಿ ಬರಲಿದ್ದಾರೆ. ಅವರು ಹಾಗೂ ಇನಾಮದಾರ ಅವರ ಬೆಂಬಲಿಗರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.