ಬೆಳಗಾವಿ : ಸೋಮನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 25.64 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಕ್ಷೇತ್ರದಲ್ಲಿ ನೂರಾರು ಶಾಲೆಗಳಿಗೆ ಕೊಠಡಿ ನಿರ್ಮಾಣ ಮಾಡಲಾಗಿದೆ. ಶಾಲಾ ಕಂಪೌಂಡ್ ಗಳನ್ನು ನಿರ್ಮಾಣ ಮಾಡಲಾಗಿದೆ. ಆಟದ ಮೈದಾನ ನಿರ್ಮಾಣವಾಗಿದೆ. ಬೆಂಚ್, ಡೆಸ್ಕ್ ಸೇರಿದಂತೆ ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ. ಮಕ್ಕಳ ಶಿಕ್ಷಣಕ್ಕೆ ಕೊರತೆಯಾಗದಂತೆ ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಹಾಗಾಗಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಶಂಕರಗೌಡ ಪಾಟೀಲ, ಶೇಖರ್ ಹೊಸೂರಿ, ಬಿ.ಎಂ.ಬಡಿಗೇರ್, ಶಿವಾನಂದ, ಯಲ್ಲಪ್ಪ ನಿಟ್ಟೂರ್, ಮಲ್ಲಪ್ಪ ಪೂಜೇರಿ, ಬಾಳಪ್ಪ ಮಾಸ್ತಮರ್ಡಿ, ರಾಮಪ್ಪ ನಿಟ್ಟೂರ್, ಹೊಳೆಪ್ಪ ನಂದ್ಯಾಗೋಳ, ಕಲ್ಲಪ್ಪ ಮಾಸ್ತಮರ್ಡಿ ಇದ್ದರು.
ದೇವಸ್ಥಾನಗಳ ನಿರ್ಮಾಣದಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ದಾಖಲೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ : ಸೋಮನಟ್ಟಿ ಗ್ರಾಮದಲ್ಲಿ ಶ್ರೀ ರೇಣುಕಾ(ಯಲ್ಲಮ್ಮ) ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳಲಿದೆ. ಈಗಾಗಲೇ ಮೊದಲನೇ ಕಂತಿನಲ್ಲಿ 10 ಲಕ್ಷ ರೂ,ಗಳನ್ನು ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಪ್ರಗತಿಯಾದಂತೆ ಉಳಿದ ಹಣವನ್ನೂ ಬಿಡುಗಡೆಗೊಳಿಸಲಾಗುವುದು. ಸುಂದರವಾದ ದೇವಸ್ಥಾನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.
ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ 140ಕ್ಕೂ ಹೆಚ್ಚು ದೇವಸ್ಥಾನಗಳ ಜೀರ್ಣೋದ್ಧಾರದ ಮೂಲಕ ದಾಖಲೆ ನಿರ್ಮಾಣ ಮಾಡಲಾಗಿದೆ. ಪ್ರತೀ ಊರಲ್ಲಿ ಮಂದಿರ ನಿರ್ಮಾಣಕ್ಕೆ ಹಣ ಒದಗಿಸಲಾಗಿದೆ. ಕೆಲವು ಊರುಗಳನ್ನು ಒಂದಕ್ಕಿಂತ ಹೆಚ್ಚು ದೇವಸ್ಥಾನಗಳಾಗಿವೆ. ಬೇಡಿಕೆಯಿದ್ದಲ್ಲಿ ಸಮುದಾಯ ಭವನಗಳನ್ನು ಸಹ ನಿರ್ಮಿಸಲಾಗಿದೆ. ಅನೇಕ ಕಡೆ ದೇವಸ್ಥಾನ ನಿರ್ಮಾಣದಿಂದ ಗ್ರಾಮದ ಚಿತ್ರಣವೇ ಬದಲಾವಣೆಯಾಗಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಮುಖಂಡರಾದ ಶಂಕರಗೌಡ ಪಾಟೀಲ, ಶೇಖರ್ ಹೊಸೂರಿ, ಬಿ.ಎಂ.ಬಡಿಗೇರ್, ಶಿವಾನಂದ, ಯಲ್ಲಪ್ಪ ನಿಟ್ಟೂರ್, ಮಲ್ಲಪ್ಪ ಪೂಜೇರಿ, ಬಾಳಪ್ಪ ಮಾಸ್ತಮರ್ಡಿ, ರಾಮಪ್ಪ ನಿಟ್ಟೂರ್, ಹೊಳೆಪ್ಪ ನಂದ್ಯಾಗೋಳ, ಕಲ್ಲಪ್ಪ ಮಾಸ್ತಮರ್ಡಿ ಇದ್ದರು.
ಕರಿಕಟ್ಟಿಯಲ್ಲಿ 2 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ
ಯಾವುದೇ ಕಾರಣದಿಂದ ಮಕ್ಕಳು ಶಾಲೆ ಬಿಡಬೇಡಿ – ಸಚಿವರ ಕರೆ
ಬೆಳಗಾವಿ : ಕರಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 30.16 ಲಕ್ಷ ರೂ,ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 2 ಹೆಚ್ಚುವರಿ ಕೊಠಡಿ ನಿರ್ಮಾಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ಹಿಂದಿನಿಂದಲೂ ಆದ್ಯತೆ ನೀಡುತ್ತಿಲ್ಲ. ಹಾಗಾಗಿ ನಾನು ಶಾಸಕಿಯಾದ ನಂತರ ಶೈಕ್ಷಣಿಕ ಮೂಲ ಸೌಕರ್ಯ ಸೃಷ್ಟಿಗೆ ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ಯಾವುದೇ ಕಾರಣದಿಂದ ವಂಚಿತರಾಗಬಾರದೆನ್ನುವುದೇ ನನ್ನ ಧ್ಯೇಯ. ಪ್ರತಿ ಊರಲ್ಲಿ ಅಗತ್ಯವಿರುವಷ್ಟು ಕೊಠಡಿ, ಶೈಕ್ಷಣಿಕ ಉಪಕರಣ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ಯಾವುದೇ ಕಾರಣದಿಂದ ಮಕ್ಕಳು ಶಾಲೆ ಬಿಡಬಾರದು ಎಂದು ಸಚಿವರು ಕರೆ ನೀಡಿದರು.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯ, ಚನಬಸ್ಸು ಧರನಟ್ಟಿ, ಯಲ್ಲಪ್ಪ ಕರಡಿಗುದ್ದಿ, ದುರಗಪ್ಪ ದಾಸನಟ್ಟಿ, ರಮೇಶ ಕಪರಟ್ಟಿ, ಸಿದರು ಕಪರಟ್ಟಿ, ತುಕಾರಾಮ ಕರಡಿಗುದ್ದಿ, ಯಲ್ಲಪ್ಪ ಧರನಟ್ಟಿ. ಯಲ್ಲಪ್ಪ ನಾಯಿಕ, ಸಿದರು ಕಪರಟ್ಟಿ ಮುಂತಾದವರು ಉಪಸ್ಥಿತರಿದ್ದರು.
ದೇವಸ್ಥಾನಕ್ಕೆ ಅನುದಾನ ಮಂಜೂರು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಸನ್ಮಾನ
ಬೆಳಗಾವಿ : ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಅನುದಾನ ಮಂಜೂರು ಮಾಡಿಸಿರುವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಗುರುವಾರ ಸನ್ಮಾನಿಸಿ, ಧನ್ಯವಾದ ಸಮರ್ಪಿಸಲಾಯಿತು.
ದೇವಸ್ಥಾನ ನಿರ್ಮಾಣಕ್ಕೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿ ಕೊಡಲಾಗಿದ್ದು, ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಸಚಿವರಿಗೆ ಗೌರವ ಸನ್ಮಾನ ಮಾಡಲಾಯಿತು.
ಉಳಿದ ಕಂತಿನ ಹಣವನ್ನೂ ಆದಷ್ಟು ಬೇಗ ಬಿಡುಗಡೆಗೊಳಿಸುವುದಾಗಿ ತಿಳಿಸಿದ ಸಚಿವರು, ಉಪಕಾರ ಸ್ಮರಣೆಗಾಗಿ ದೇವಸ್ಥಾನ ಸಮಿತಿಯವರಿಗೆ ಧನ್ಯವಾದ ಸಲ್ಲಿಸಿದರು. ಎಲ್ಲರೂ ಕೈ ಜೋಡಿಸಿದಾಗ ಅಭಿವೃದ್ಧಿ ಸಾಧ್ಯವಾಗುತ್ತದೆ. ಕ್ಷೇತ್ರದ ಜನರು ನಿರಂತರವಾಗಿ ಜೊತೆಗೆ ನಿಂತಲ್ಲಿ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ಈ ವೇಳೆ ಶಂಕರಗೌಡ ಪಾಟೀಲ, ನಿಲೇಶ ಚಂದಗಡ್ಕರ್, ವಸಂತರಾವ ಜಾಧವ್, ಪ್ರಭಾಕರ್ ಹುಲಕುಂದ, ಪ್ರವೀಣ ಮುರಾರಿ, ರೇಣುಕಾ ಕರವಿನಕೊಪ್ಪ, ಕಲ್ಲಪ್ಪ ಧರೆಣ್ಣವರ, ನಾಗೇಶ ದೇಸಾಯಿ, ಉಮೇಶ್ ದೇಶಪಾಂಡೆ, ಗಣಪತಿ ಬಾಲಣ್ಣವರ್, ಸುರೇಶ ಪಗಡಿ, ರಾಮಣ್ಣ ರಾಮಚನ್ನವರ್ ಉಪಸ್ಥಿತರಿದ್ದರು.
ಆರ್ಥಿಕ ನೆರವು ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಿದ್ದನಹಳ್ಳಿ ಗ್ರಾಮದ ಕಾರ್ಯಕರ್ತರಾದ ಬಸಪ್ಪ ಸುಲಧಾಳ ಇವರ ಮಗನಾದ ಬಾಳಕೃಷ್ಣ ಸುಲಧಾಳ ರಸ್ತೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ನೀಡಿದರು.
ಕರಿಕಟ್ಟಿ ಗ್ರಾಮದ ಯಲ್ಲಪ್ಪ ಬೋರಿಮರದ ಇವರ ಮಗನಾದ ಸಚಿನ ಬೋರಿಮರದ ರಸ್ತೆ ಅಪಘಾತದಲ್ಲಿ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಮೃತರ ಮನೆಗೆ ಗುರುವಾರ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ಮಾಡಿದರು.
5 ಲಕ್ಷ ರೂ. ಪರಿಹಾರ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಬೆಳಗಾವಿ : ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದ ಯುವಕನ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗುರುವಾರ ಪರಿಹಾರ ವಿತರಿಸಿದರು.
ತುಮ್ಮರಗುದ್ದಿ ಗ್ರಾಮದ ಲಕ್ಷ್ಮಣ ಕೆಂಪದಿನ್ನಿ ಇವರ ಮಗ ಸಾಯಿನಾಥ್ ಕೆಲವು ದಿನಗಳ ಹಿಂದೆ ಗುತ್ತಿಗೆ ಆಧಾರದ ಮೇಲೆ ವಿದ್ಯುತ್ ಕೆಲಸಕ್ಕೆ ತೆರಳಿದ ವೇಳೆ ವಿದ್ಯುತ್ ತಂತಿ ಪ್ರವಹಿಸಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ಕುಟುಂಬಕ್ಕೆ 5 ಲಕ್ಷ ರೂ,ಗಳ ಚೆಕ್ ನ್ನು ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ವೇಳೆ ಶೇಖರ್ ಹೊಸೂರಿ, ಶಂಕರಗೌಡ ಪಾಟೀಲ, ಕಲ್ಲಪ್ಪ ಸುತಗಟ್ಟಿ, ಬಾಳಪ್ಪ ಸಿನಗಿ, ಸತ್ಯಪ್ಪ ನಂದ್ಯಾಗೋಳ, ಬಸುನಿ ಪಾಟೀಲ, ವಿಲ್ಸನ್ ಮಹಾರ್, ಮಲ್ಲಪ್ಪ ಗೋಸಾವಿ, ಶೇಖರ್ ಸಿನಗಿ, ಶಿವಾಜಿ ತಳವಾರ್, ಬಾಳಪ್ಪ ಯದ್ದಲಗುಡ್ಡ ಇದ್ದರು.