ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರ ಕೃಪೆ, ಆಶಿರ್ವಾದದಿಂದಾಗಿ ಸಂಪೂರ್ಣ ರಾಜ್ಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. 1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆ ಮೂಲಕ ಸಹಾಯ ಮಾಡುವ ಅವಕಾಶ ಸಿಕ್ಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಶುಕ್ರವಾರ ಸಂಜೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅತವಾಡ ಕಾಂಗ್ರೆಸ್ ಕಮಿಟಿ, ವಿವಿಧ ಸಂಘಟನೆಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮದ ಬೇಡಿಕೆಗಳನ್ನು ಈಡೇರಿಸಲು ನಾನು ಬದ್ದನಾಗಿದ್ದೇನೆ. ಈಗಾಗಲೆ ಈ ಕುರಿತ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ಇಷ್ಟರಲ್ಲೇ ಚಾಲನೆ ನೀಡಲಾಗುವುದು ಎಂದ ಅವರು, ಗ್ರಾಮಸ್ಥರ ಆರೋಗ್ಯದ ಹಿತ ದೃಷ್ಟಿಯಿಂದ ಇದೇ ವೇಳೆ ಸಾರ್ವಜನಿಕರ ಜಿಮ್ ಗೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಾರುತಿ ಬೆಳಗಾಂವ್ಕರ್, ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ವಸಂತ ಕಣಬರ್ಕರ್, ಕಲ್ಲಪ್ಪ ಕಡೋಲ್ಕರ್, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಕಾಂಬಳೆ, ಶುಭಾಂಗಿ ಪಾಟೀಲ, ನಾರಾಯಣ ಎಮ್, ಬಾಳು ಪಾಟೀಲ, ವಸಂತ ಪಾಟೀಲ, ಸಾತೇರಿ ಕಡೋಲ್ಕರ್, ಸಾತೇರಿ ಪಾಟೀಲ, ಅಶೋಕ ಪಾಟೀಲ, ಸೋಮನಾಥ್ ಪಾಟೀಲ, ನಾರಾಯಣ ಪಾಟೀಲ ಹಾಗೂ ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.