ಬೆಳಗಾವಿ: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೂರಕ್ಕೂ ಹೆಚ್ಚು ದೇವಾಲಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅರಳಿಕಟ್ಟಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಬಸವೇಶ್ವರ ಮಂದಿರದ ಮೇಲ್ಚಾವಣಿಗೆ ಕಾಂಕ್ರೀಟ್ (ಸ್ಲ್ಯಾಬ್) ಹಾಕುವ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಕ್ಷೇತ್ರದಲ್ಲಿ ಈಗಾಗಲೇ ಹಲವು ದೇವಾಲಯಗಳ ಅಭಿವೃದ್ಧಿ ಮಾಡಿದ್ದು, ಸರ್ವ ಜನಾಂಗದ ಶೃದ್ಧಾ ಕೇಂದ್ರಗಳ ಜೀರ್ಣೋದ್ಧಾರಕ್ಕೆ ಕ್ರಮಕೈಗೊಳ್ಳಲಾಗಿದೆ. ದೇವಾಲಯಗಳ ಅಭಿವೃದ್ಧಿ ಮಾಡುವ ಜೊತೆಗೆ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಹ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಸಿ.ಸಿ.ಪಾಟೀಲ್, ಸುರೇಶ ಇಟಗಿ, ಬಿ.ಎನ್.ಪಾಟೀಲ್, ಅಣ್ಣಪ್ಪ ಪಾಟೀಲ್, ಗುರಪ್ಪ ಹೆಬ್ಬಾಳಕರ್, ಬಸವರಾಜ ಸತ್ತಿಗೇರಿ, ರುದ್ರಪ್ಪ ಉಪ್ಪಾರ, ರಮೇಶ ತಿಗಡಿ, ರಾಜು ಉಪ್ಪಾರ, ಗೌಡಪ್ಪ ಪಾಟೀಲ, ನಾಗರಾಜ ಕರಲಿಂಗನ್ನವರ, ಗಿಡ್ಡಣ್ಣ ಸಿಂಗಾಡಿ, ಎನ್ ಸಿ ಬಾಗೇವಾಡಿ, ಚಂಬಣ್ಣ ಉಳೆಗಡ್ಡಿ, ಅನಿಲ ಕರಲಿಂಗನ್ನವರ, ಮಂಜು ಪಾರ್ವತಿ, ಅಡಿವೆಪ್ಪ ಕರಲಿಂಗನ್ನವರ, ಈರಣ್ಣ ಮೂಲಿಮನಿ, ಗಂಗಯ್ಯ ಹಲಕರಣಿಮಠ, ಶಂಕರ ಹರಿಜನ, ಪ್ರಕಾಶ್ ಎ, ಈರಪ್ಪ ದನದಮನಿ, ಈರಯ್ಯ ಪೂಜಾರಿ, ಈರಯ್ಯ ಮಠಪತಿ, ರುದ್ರಪ್ಪ ಕಟ್ಟಿಕಾರ, ವಿಠ್ಠಲ, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.