ಬೆಂಗಳೂರು:
ಗೃಹ ಲಕ್ಷ್ಮೀ ಯೋಜನೆಯ ಹಣ ಬರದಿದ್ದರೆ ಹೆಲ್ಪ್ಲೈನ್ಗೆ ಕರೆ ಮಾಡಬಹುದು. ಸಿಡಿಪಿಐ ಕರೆದು ಸಮಸ್ಯೆ ಕೇಳುತ್ತಿದ್ದೆವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಗೃಹ ಲಕ್ಷ್ಮೀ ಯೋಜನೆ ಹಣ ವಿಳಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಕ್ಟೋಬರ್ ಹಣ ಇನ್ನು ಎರಡು ಮೂರು ದಿನದಲ್ಲಿ ಖಾತೆಗೆ ಹೋಗಲಿದೆ. ಡಿಡಿಗಳಿಗೆ ಜವಾಬ್ದಾರಿ ಕೊಡುತ್ತಿಲ್ಲ, ಅದು ತಡವಾಗ್ತಿದೆ. ಈಗ ಸಚಿವಾಲಯದ ಕಡೆಯಿಂದ ಬಿಲ್ ಮಾಡಿ ಡಿಬಿಟಿ ಮಾಡಲಾಗುತ್ತದೆ. ಒಂದನೇ ತಾರೀಖಿಗೆ ಪ್ರಕ್ರಿಯೆ ಶುರು ಆಗುತ್ತೆ. ಮೊದಲು 20 ದಿನ ತಡ ಆಗ್ತಿತ್ತು. ಇದೀಗ ಅದನ್ನ ಕಡಿಮೆ ಮಾಡಲು ಪ್ರಯತ್ನ ಪಡುತ್ತಿದ್ದೆವೆ. ಶೀಘ್ರದಲ್ಲೇ ಹಣ ಜನರಿಗೆ ಸಿಗಲಿದೆ ಎಂದು ಹೇಳಿದರು.
ಅಗಸ್ಟ್ 30 ನೇ ತಾರೀಖು ಗೃಹಲಕ್ಷ್ಮಿ ಯೋಜನೆಯನ್ನು ಲಾಂಚ್ ಮಾಡಿದ್ದೇವೆ. ಹಲವರಿಗೆ ತಲುಪಿದೆ, ಆದ್ರೆ ಕೆಲವು ಗೊಂದಲ ಸೃಷ್ಟಿಯಾಗಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಅಗಸ್ಟ್ ನಲ್ಲಿ 1.08 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್-1.12 ಕೋಟಿ, ಅಕ್ಟೋಬರ್ 1.16 ಕೋಟಿ ನೋಂದಣಿಯಾಗಿದೆ. ಅಗಸ್ಟ್ ತಿಂಗಳಲ್ಲಿ 2169 ಕೋಟಿ ರೂ ಹಾಕಲಾಗಿದೆ. 97% ಕುಟುಂಬಕ್ಕೆ ಡಿಬಿಟಿ ಮೂಲಕ ಹಣ ಹೋಗಿದೆ. 5 ಲಕ್ಷ ಜನರಿಗೆ ದುಡ್ಡು ಹೋಗಿಲ್ಲ. ಸೆಪ್ಟೆಂಬರ್ ರಲ್ಲಿ 2288 ಕೋಟಿ ಹಣ ಬಿಡುಗಡೆಯಾಗಿದೆ ಎಂದರು.
ಒಟ್ಟು 82% ಜನರಿಗೆ ಹಣ ಹೋಗಿತ್ತು. ಆದ್ರೆ 12 ಲಕ್ಷ ಜನರ ದುಡ್ಡು ಹೋಗಿಲ್ಲ, ಬ್ಯಾಂಕ್ ಅಕೌಂಟ್ ನಲ್ಲಿದೆ ಎಂದ ಹೆಬ್ಬಾಳ್ಕರ್, ಅಕ್ಟೋಬರ್ ನಲ್ಲಿ 2400 ಕೋಟಿ ಹಣ ಬಿಡುಗಡೆಯಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ 7.90 ಲಕ್ಷ ಅರ್ಜಿ ವಿಲೇವಾರಿಗೆ ಬಾಕಿಯಿದೆ. ಈ ತಿಂಗಳು ಎಲ್ಲರ ಅಕೌಂಟ್ ಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಇದೀಗ ಒಂದು ದಿನಕ್ಕೆ ಮೂರು ಜಿಲ್ಲೆಯ ಸಿಡಿಪಿ ಸಭೆಯಾಗ್ತಿದೆ. ಬೆಂಗಳೂರಿನಲ್ಲೇ ಕುಳಿತು ಸಮಸ್ಯೆಯನ್ನು ಬಗೆ ಹರಿಸಲಾಗ್ತಿದೆ. ದೀಪಾವಳಿಗೆ ಎಲ್ಲರ ಖಾತೆಗೆ ಹಣ ಹೋಗಬೇಕು ಅಂತ ಸಿಎಂ ಹೇಳಿದ್ದಾರೆ. 15 ದಿನದ ಒಳಗಾಗಿ ಎಲ್ಲರ ಖಾತೆಗೆ ಹಣ ಬರಲಿದೆ ಎಂದು ಹೇಳಿದರು.
ಗೃಹಲಕ್ಷ್ಮಿಯ ಆದೇಶ ಪ್ರತಿ ಇದ್ದವರಿಗೆಲ್ಲ ಹಣ ಸಿಗಲಿದೆ. ಮೂರು ತಿಂಗಳ ಹಣ ಬಂದಿಲ್ಲ ಅಂದ್ರೆ ಒಟ್ಟಿಗೆ ಆರು ಸಾವಿರ ಸಿಗಲಿದೆ ಎಂದ ಅವರು, ಬಾಕಿ ಇರೋ ಹಣ ಎಲ್ಲದು ಸೇರಿ ಈ ತಿಂಗಳು ಬರಲಿದೆ ಎಂದರು.