ಬೆಳಗಾವಿ : ಶಿವಯೋಗಿಗಳ ನಾಡಿನಲ್ಲಿ ಕಳೆದ ಮೂರು ವರ್ಷ ದಶಕಗಳಿಂದ ಅಹರ್ನಿಶಿಯಾಗಿ ಜನಸೇವೆ ಮಾಡುತ್ತಾ ಬಂದಿರುವ ಹಾಲಿ ಕಾಂಗ್ರೆಸ್ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳು ಆಗಿರುವ ಲಕ್ಷ್ಮಣ ಸವದಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇಡೀ ಅಥಣಿ ನಾಡು ಇಂದು ತಮ್ಮ ಪ್ರೀತಿಪಾತ್ರ ನಾಯಕನ ಹುಟ್ಟು ಹಬ್ಬದ ಸಂಭ್ರಮ ಆಚರಿಸುತ್ತಿದೆ.
ಶಾಸಕರಾಗಿ ಲಕ್ಷ್ಮಣ ಸವದಿ ಅವರು ಮಾಡಿರುವ ಕೆಲಸ ಕಾರ್ಯಗಳು ಜನಮಾನಸದಲ್ಲಿ ಸದಾ ಅಚ್ಚೊತ್ತಿವೆ. ಹೀಗಾಗಿ ಲಕ್ಷ್ಮಣ ಸವದಿ ಅವರು ನಿರಂತರವಾಗಿ ಅಥಣಿ ವಿಧಾನಸಭಾ ಮತಕ್ಷೇತ್ರದಿಂದ ಗೆದ್ದು ಶಾಸಕರಾಗುತ್ತಿದ್ದಾರೆ. ತಮ್ಮ ಅತ್ಯಂತ ಹರಿತ ಹಾಗೂ ಚೂಪಾದ ವಾಗ್ಭಣಗಳ ಮೂಲಕ ಅವರು ಶ್ರೇಷ್ಠ ವಾಗ್ಮಿ ಎನಿಸಿಕೊಂಡಿದ್ದಾರೆ. ಎದುರಾಳಿಗಳನ್ನು ಅತ್ಯಂತ ನಯವಾಗಿಯೇ ಕೆಣಕುವ ಸಾಮರ್ಥ್ಯ ಹೊಂದಿರುವ ಲಕ್ಷ್ಮಣ ಸವದಿ ಅವರು ಈ ಭಾಗದ ಅಜಾತಶತ್ರು ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ರಣರಂಗದ ಎಲ್ಲಾ ಪಟ್ಟುಗಳನ್ನು ಬಲ್ಲ ಅವರು ರಾಜಕೀಯದ ಚಾಣಕ್ಯ ಎಂದೇ ಗುರುತಿಸಿಕೊಂಡವರು. ಈ ಹಿಂದೆ ಅವರು ಬಿಜೆಪಿಯಲ್ಲಿ ಇದ್ದಾಗ ಉಪಚುನಾವಣೆಗಳನ್ನು ಗೆಲ್ಲಿಸಿ ಕೊಡುವ ಮೂಲಕ ಆ ಪಕ್ಷಕ್ಕೆ ಬಹು ಮಹತ್ತರ ಕೊಡುಗೆಯನ್ನು ನೀಡಿದವರು. ಸದ್ಯ ಕಳೆದ ಎರಡೂವರೆ ವರ್ಷಗಳಿಂದ ಅವರು ಕಾಂಗ್ರೆಸ್ ಶಾಸಕರಾಗಿ ಬದಲಾದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಾಮರ್ಥ್ಯಕ್ಕೆ ಸಚಿವ ಹುದ್ದೆಯೇ ದಕ್ಕಬೇಕಾಗಿತ್ತು. ಆದರೆ ಜಿಲ್ಲಾ ಸಚಿವ ಸ್ಥಾನದ ಕೋಟಾದ ಕಾರಣದಿಂದಾಗಿ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಭವಿಷ್ಯದಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅವರ ಸಚಿವ ಸಂಪುಟ ವಿಸ್ತರಣೆ ವೇಳೆ ಅವರು ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ. ಸವದಿ ಅವರಂತಹ ಕೆಲಸ ಮಾಡುವ ಉತ್ಸಾಹಿ ಜನನಾಯಕರ ಅಗತ್ಯ ಇದೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅರಿತಿದ್ದಾರೆ. ಹೀಗಾಗಿಯೇ ಈ ಇಬ್ಬರು ನಾಯಕರು ಲಕ್ಷ್ಮಣ ಸೌದಿ ಅವರ ಮೇಲೆ ಅಪಾರವಾದ ವಿಶ್ವಾಸ ಇಟ್ಟುಕೊಂಡಿದ್ದಾರೆ.
ಇದೀಗ ತಮ್ಮದೇ ರಾಜ್ಯ ಸರ್ಕಾರವಿದೆ. ಹೀಗಾಗಿ ಅಥಣಿ ಕ್ಷೇತ್ರಕ್ಕೆ ಏನೆಲ್ಲ ಬೇಕೋ ಅದನ್ನೆಲ್ಲ ತರುವಲ್ಲಿ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಈ ಭಾಗದ ಬಹುದಿನಗಳ ಬೇಡಿಕೆ ನಿರಂತರ ಹಂತ ಹಂತವಾಗಿ ಈಡೇರಿಕೆಯಾಗುತ್ತಿದೆ. ಹಿಂದುಳಿದ ವಿಧಾನಸಭಾ ಮತಕ್ಷೇತ್ರ ಎಂಬ ಅವಕೃಪೆಗೆ ಗುರಿಯಾಗಿದ್ದ ಅಥಣಿ ಮತಕ್ಷೇತ್ರ ಈಗ ಅಭಿವೃದ್ಧಿ ಹೊಂದುತ್ತಿರುವ ಮತಕ್ಷೇತ್ರ ಎಂದು ಬದಲಾವಣೆಯ ಪರ್ವಕ್ಕೆ ಬಂದು ನಿಂತಿದೆ. ಅಷ್ಟೊಂದು ಗಣನೀಯ ಪ್ರಮಾಣದಲ್ಲಿ ಲಕ್ಷ್ಮಣ ಸವದಿ ಅವರು ಅಥಣಿ ವಿಧಾನಸಭಾ ಮತಕ್ಷೇತ್ರಕ್ಕೆ ಅಭಿವೃದ್ಧಿಯ ಹೊಳೆಯನ್ನೆ ಹರಿಸುತ್ತಿರುವುದು ಗಮನಾರ್ಹ ಸಂಗತಿ.
ಇದೀಗ ತಮ್ಮ ಅಚ್ಚುಮೆಚ್ಚಿನ ನಾಯಕನ ಹುಟ್ಟುಹಬ್ಬ ಆಚರಣೆಗೆ ಅಥಣಿ ಸಜ್ಜಾಗಿದೆ. ಸೋಮವಾರದಂದು ತಮ್ಮ ನಾಯಕನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳ ಸಂಭ್ರಮ ಈಗ ಮುಗಿಲುಮುಟ್ಟಿದೆ.

ರಾಜಕೀಯ, ಸಹಕಾರ ಮತ್ತು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತರ ಕರ್ನಾಟಕದ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಉನ್ನತಿಗಾಗಿ ಹಗಲು-ಇರುಳು ಶ್ರಮಿಸುತ್ತಿರುವ ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರು ಇಂದಿನ ರಾಜಕಾರಣಿಗಳಲ್ಲಿ ವಿಭಿನ್ನವಾಗಿಯೇ ಬೆಳೆದು ನಿಂತಿದ್ದಾರೆ,ಯುವ ಸಮುದಾಯಕ್ಕೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಸಾಂಸ್ಕೃತಿಕ ನೆಲಗಟ್ಟಿನ ಅಥಣಿ ತಾಲೂಕಿನ ನಾಗನೂರ ಪಿ ಕೆ ಗ್ರಾಮದ ಪರಿಸರದಲ್ಲಿ ಬೆಳೆದು ಬಂದ ನಕ್ಷತ್ರ ಲಕ್ಷ್ಮಣ ಸವದಿ.ಇವರು ಬೆಳೆದು ನಿಂತ ಪರಿಗೆ ರಾಜ್ಯವೇ ಬೆಚ್ಚಿದೆ. ಸಂಘಟನಾ ಶಕ್ತಿ,ರಾಜಕಾರಣದ ಒಳ ಹೊರ ಮಗ್ಗುಲಗಳನ್ನು ಅರಿತಿರುವವರು ಮಾತಿಗೆ ನಿಂತರೆ ಎಂತಹವರು ಬೆರಗಾಗುವಂತಹ
ಚಾಕಚಕ್ಯತೆ ಹೊಂದಿರುವ ಮುತ್ಸದ್ಧಿ ರಾಜಕಾರಣಿ ಉತ್ತರ ಕರ್ನಾಟಕ ಕಂಡ ಏಕೈಕ ನಾಯಕ.
ಮನೆತನದಲ್ಲಿಯೇ ಯಾವುದೇ ರಾಜಕೀಯ ನೆಲೆಗಟ್ಟು ಇಲ್ಲದೆ ಬೆಳೆದು ಬಂದರು, ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬೆಳೆಸಿಕೊಂಡು ಹಂತ ಹಂತವಾಗಿ ರಾಜಕೀಯದಲ್ಲಿ ಮೇಲೇರಿದವರು. ಸಹಕಾರ ರಂಗದಿಂದ ರಾಜಕೀಯ ಕ್ಷೇತ್ರಕ್ಕೆ ಬಂದು ಸಹಕಾರ ಸಚಿವರಾದವರು. ಪಿಕೆ ನಾಗನೂರ ಗ್ರಾಮದಲ್ಲಿ ಪಿಕೆಪಿಎಸ್ ಸೊಸೈಟಿ ನಿರ್ದೇಶಕರಾಗಿ, ಮುಂದೆ ಬೆಳಗಾವಿ ಮಧ್ಯವರ್ತಿ ಬ್ಯಾಂಕಿನ ನಿರ್ದೇಶಕರಾಗಿ ಇಂದಿನ ವರೆಗೂ ಅವಿರೋಧವಾಗಿ ನಿರಂತರವಾಗಿ ಆಯ್ಕೆ ಆಗುತ್ತಾ ಬಂದವರು. ಅಲ್ಲಿಂದ ರಾಜ್ಯ ಅಪೆಕ್ಸ್ ಬ್ಯಾಕಿನ ಉಪಾಧ್ಯಕ್ಷರಾಗಿ, ಸಂಸದೀಯ ಕಾರ್ಯದಶಿಯಾಗಿ, ಸಹಕಾರ ಸಚಿವರಾಗಿ, ಸಾರಿಗೆ ಸಚಿವರಾಗಿ, ಕೃಷಿ ಸಚಿವರಾಗಿ ಇವರು ಕೈಗೊಂಡ ನಿರ್ಧಾರಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿವೆ.
ರಾಜ್ಯದಲ್ಲಿ ವೈದ್ಯನಾಥನ್ ವರದಿ ಅನುಷ್ಠಾನಕ್ಕೆ ತರುವ ಮೂಲಕ ಅಶಕ್ತವಾಗಿದ್ದ ಸಹಕಾರಿ ಸಂಘಗಳಲ್ಲಿ ಜೀವ ತುಂಬುವ ಕೆಲಸ ಮಾಡಿ ರೈತ ಸಮುದಾಯಕ್ಕೆ ಸೊನ್ನೆ ಪ್ರತಿಶತದಲ್ಲಿ ಸಾಲ ವಿತರಿಸಲು ಸಾಧ್ಯವಾಗಿಸಿ ಇತಿಹಾಸದ ಪುಟದಲ್ಲಿ ತಮ್ಮ ಹೆಸರು ಅಚ್ಚ ಅಳಿದಂತೆ ಶಾಶ್ವತವಾಗಿ ಉಳಿಯುವಂತೆ ಮಾಡಿದರು. ಯಶಸ್ವಿನಿ ಯೋಜನೆ ಮುಖಾಂತರ ರೈತರಿಗೆ ವಿಮೆ ಯೋಜನೆ ಕಲ್ಪಿಸಿಕೊಟ್ಟರು. ನಿಜವಾಗಿ ರೈತರ ಹಿತ ಬಯಸುವ ನಾಯಕರಾದವರು.
ಬೆಳಗಾವಿ ಜಿಲ್ಲೆಯನ್ನು ಎರಡನೇ ರಾಜಧಾನಿಯಾಗಿ ಮಾಡುವ ನಿಟ್ಟಿನಲ್ಲಿ ಇವರು ವಹಿಸಿದ ಪರಿಶ್ರಮ ಮಹತ್ವದಾಗಿದೆ. ಸದಾ ಉತ್ತರ ಕರ್ನಾಟಕ ಮತ್ತು ಅಥಣಿ ಕ್ಷೇತ್ರದ ಅಭಿವೃದ್ಧಿ ಕುರಿತು ಚಿಂತಿಸುವ ಇವರು ರಾಜ್ಯದ ಉಳಿದ ನಾಯಕರುಗಳಿಗೆ ಮಾದರಿಯಾಗಿ ನಿಲ್ಲುತ್ತಾರೆ.
ರೈತ ಎನ್ನುವ ವಾಕ್ಯಕ್ಕೆ ನಿಜವಾದ ಅರ್ಥ ಕಲ್ಪಿಸಿಕೊಟ್ಟ ಧೀಮಂತ ನಾಯಕರಿವರು.ಜನ ಇವರನ್ನು ಹೃದಯ ತುಂಬಿ “ಸಾಹುಕಾರ ಸವದಿ”ಎಂದೇ ಕರೆಯುತ್ತಾರೆ. ಹಸಿರು ಕ್ರಾಂತಿಯ ಹರಿಕಾರನೆಂದು ಹೃದಯತುಂಬಿ ಧನ್ಯತಾ ಭಾವ ವ್ಯಕ್ತಪಡಿಸುತ್ತಾರೆ.
ರೈತರು ಗುಣಮಟ್ಟದ ವಿದ್ಯುತ್ ಸೌಲಭ್ಯದಿಂದ ತಮ್ಮನೀರಾವರಿ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ,ತಾಲೂಕಿನ ಹಲವಾರು ಧಾರ್ಮಿಕ ಸಂಘ ಸಂಸ್ಥೆಗಳಿಗೆ ಹಾಗೂ ಮಠಮಾನ್ಯಗಳಿಗೆ ಸರ್ಕಾರದಿಂದ ಸಿಗುವ ಅನುದಾನವನ್ನು ಒದಗಿಸಿಕೊಟ್ಟು ದೇವಾಲಯಗಳ ಜೀರ್ಣೋದ್ಧಾರ ಮಾಡಿ ಧಾರ್ಮಿಕ,ಸಾಮಾಜಿಕ ಪರಿವರ್ತನೆ ಕೇಂದ್ರಗಳನ್ನು ಪುನರುಜ್ಜೀವನಗೊಳಿಸಿದ್ದಾರೆ.
ತಾಲೂಕಿನ ಜನತೆಯನ್ನು ಜಾತಿ,ಮತ,ಪಂಥಗಳ ಪಕ್ಷಪಾತವಿಲ್ಲದೆ ಆತ್ಮೀಯವಾಗಿ ಬರಮಾಡಿಕೊಳ್ಳುವ ಹೃದಯ ವೈಶಾಲ್ಯತೆ ಹೊಂದಿರುವ ಇವರು ಶ್ರೇಷ್ಠ ಸಮಾಜ ಸೇವಕರಾಗಿದ್ದಾರೆ.ಇವರ ಕಾರ್ಯದಕ್ಷತೆ ಮೆಚ್ಚಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಅಹುದೆನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಜನಪ್ರಿಯ ಜನನಾಯಕ,ಇಂತಹ ಸರಳ ಸಂಜ್ಜನಿಕೆಯ ಸಾಕಾರಮೂರ್ತಿಯಾದ ಲಕ್ಷ್ಮಣ ಸವದಿಯವರಿಗೆ ಆ ದೇವರು ಮತ್ತಷ್ಟು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಮಾನಗಳನ್ನು ಆ ಶ್ರೀ ಶಿವಯೋಗಿ ಮುರಘೇಂದ್ರ ಕಲ್ಪಿಸಿ ಕೊಡಲಿ ಎಂಬ ಹಾರೈಕೆಗಳು.


