ಬೆಳಗಾವಿ :
ಗುರುವಾರ ನನ್ನ ನಿರ್ಧಾರ ಪ್ರಕಟಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಬಿಜೆಪಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿ. ನಂತರ ಮಾತನಾಡುವೆ. ನಾನು ಏಪ್ರಿಲ್ 13 ರಂದು ಬೆಂಬಲಿಗರ ಸಭೆ ಕರೆದಿದ್ದೇನೆ. ಜನ ಈ ಬಾರಿ ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿ ಎಂದರೆ ಸ್ಪರ್ಧಿಸುತ್ತೇನೆ, ಬೇಡ ಎಂದರೆ ಮನೆಯಲ್ಲಿ ಇರುತ್ತೇನೆ. ಅಂತಿಮವಾಗಿ ನನ್ನ ಕ್ಷೇತ್ರದ ಜನರ ನಿರ್ಧಾರವೇ ಅಂತಿಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಸಂಪರ್ಕಿಸುತ್ತೇನೆ ಎಂದಿದ್ದು ಅವರ ಮೊಬೈಲ್ ಕರೆಗಾಗಿ ಕಾಯುತ್ತಿದ್ದೇನೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.