ಬೆಳಗಾವಿಯಲ್ಲಿ ನಿನ್ನೆ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪತ್ರಿಕಾಗೋಷ್ಠಿ ನಡೆಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆದಿದ್ದರು. ಇದರ ಮುಂದುವರಿದ ಪ್ರಕ್ರಿಯೆಯಾಗಿ ಇಂದು ಅವರ ಸಹೋದರ ಲಖನ್ ಜಾರಕಿಹೊಳಿ ಅವರು ಡಿ.ಕೆ.ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಡಿ ಫ್ಯಾಕ್ಟರಿ ಸ್ಟಾರ್ಟ್ ಆಗಿ ಕನಕಪುರದಲ್ಲಿ ರಿಲೀಸ್ ಆಗಿದೆ. ಓಪನ್ ಆಗಿ ಹೇಳಿದ್ರೆ ನಾನು ಆ ಹೆಣ್ಣುಮಗಳು ಈ ಮಗಳು ಅಂತಾರೆ, ಒಂದು ವರ್ಷದಿಂದ ಸಿಬಿಐಗೆ ಕೊಡಬೇಕೆಂಬ ಒತ್ತಾಯ ಇದೆ. ಸಾಕಷ್ಟು ಜನಇದರಲ್ಲಿ ನೊಂದು ಬೆಂದು ಬೇಸತ್ತು ಹೋಗಿದ್ದಾರೆ. ನಮಗೆ ಜನ ಬೆಂಬಲ ಇದೆ, ಇಂತಹ ನೂರು ಸಿಡಿ ಬಂದರೂ ಹೆದರಲ್ಲ. ಒಂಟಿತೋಳ ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು, ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣ. ನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ ಎಂದಿದ್ದಾರೆ ಲಖನ್ ಜಾರಕಿಹೊಳಿ. ವಿಷಕನ್ಯೆ, ಮಟಾಷ್ ಲೆಗ್, ರಕ್ತ ಕಣ್ಣೀರು ಅಂತಾ ಜನ ಮಾತನಾಡ್ತಾರೆ, ಮಟಾಷ್ ಲೆಗ್ ಅಂದು ಆಯ್ತು ಕುಮಾರಸ್ವಾಮಿ ಸರ್ಕಾರ ಹೋಯ್ತು. ಸಮ್ಮಿಶ್ರ ಸರ್ಕಾರ ಆಯ್ತು ಆಮೇಲೆ ಇದ್ದಿದ್ದು ರಕ್ತ ಕಣ್ಣೀರು ಎಂದು ಲಖನ್ ಡೈಲಾಗ್ ಹೊಡೆದಿದ್ದಾರೆ.
ಗೋಕಾಕ :
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ವಿಧಾನಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಸಿಡಿದೆದ್ದಿದ್ದಾರೆ. ಈ ಮೂಲಕ ಅವರು ತಮ್ಮ ಸಹೋದರ ರಮೇಶ ಜಾರಕಿಹೊಳಿ ಬೆಂಬಲಕ್ಕೆ ನಿಂತಿದ್ದು ಡಿಕೆಶಿ ವಿರುದ್ಧ ತೀವ್ರ ಸಮರ ಸಾರಿದ್ದಾರೆ. ಡಿಕೆಶಿಗೆ ತಿರುಗೇಟು ನೀಡಿರುವ ಲಖನ್ ಜಾರಕಿಹೊಳಿ ಅವರು ಲಂಚ ಮಂಚ ಅಂತ ಈ ಮಹಾರಾಜ ಹೇಳುತ್ತಾನೆ, ಇವನು ಲುಂಗಿ ಬಿಚ್ಚುವುದು ಎಲ್ಲಾ ನಮಗೆ ಗೊತ್ತು. ಬೆಳಗಾವಿಗೆ ಬಂದಾಗ ಎಲ್ಲಿ ಲುಂಗಿ ಬಿಚ್ಚುತ್ತಾನೆ, ಎಲ್ಲಿ ಪ್ಯಾಂಟ್ ಬಿಚ್ಚುತ್ತಾನೆ ಎನ್ನುವುದು ಗೊತ್ತಿದೆ. ಬೆಳಗಾವಿ ಸರ್ಕ್ಯೂಟ್ ಹೌಸ್ ನಿಂದ ಎಲ್ಲಿಗೆ ಇವನ ಗಾಡಿ ಹೋಗುತ್ತದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದು ಸಮಯ ಬಂದಾಗ ದಾಖಲೆಯನ್ನು ಸಹ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ. ಬೆಳಗಾವಿಯಲ್ಲಿ
ಸಿಡಿ ಕಾರ್ಖಾನೆ ಇದೆ. ಬೆಳಗಾವಿಯಿಂದ ತಯಾರಾಗಿ ಕನಕಪುರ ಮತ್ತು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತದೆ. 2೦೦೦ ಇಸ್ವಿಯಿಂದ ಸಿಡಿ ಕಾರ್ಖಾನೆ ಚಾಲ್ತಿಯಲ್ಲಿದ್ದು, ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ. ಕರ್ನಾಟಕದ ಕೆಪಿಸಿಸಿ ಅಂದ್ರೆ, ಕರ್ನಾಟಕ ಪ್ರದೇಶ ಸಿಡಿ ಕಮೀಟಿ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಖರ್ಗೆ, ಪರಮೇಶ್ವರ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು, ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ. ಕಾಂಗ್ರೆಸ್ನಲ್ಲಿ ಡಿಕೆಶಿ ಬಗ್ಗೆ ಯಾರೂ ಮಾತನಾಡಲ್ಲ, ಎಲ್ಲರ ಸಿಡಿಗಳು ಅವನ ಬಳಿ ಇವೆ ಎಂದು ಹೇಳಿದರು.
ಸಿಡಿ ಪ್ರಕರಣ ಮಾರ್ಚ್ 3 ನೇ ತಾರೀಖಿಗೆ ಎರಡು ವರ್ಷ ಆಯ್ತು, ಎಲ್ಲ ಷಡ್ಯಂತ್ರ ನಡೆದಿದೆ. 2೦೦೦ನೇ ಇಸವಿಯಿಂದ ಇದು ಇದೆ, ಇದಕ್ಕೆ ಸಿಬಿಐ ತನಿಖೆ ಒಂದೇ ಪರಿಹಾರ. ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ ಹಾಗೇ 800 ಸ್ಟಾರ್ಟ್ ಆಗಿ ಬಿಎಂಡಬ್ಲ್ಯೂವರೆಗೂ ಇದೆ. ಒಂಟಿತೋಳ ಒಂಟಿತೋಳ ಅಂದ್ರು ಒಂಟಿತೋಳ ಏನ್ ಮಾಡಿತು, ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣ. ನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ ಎಂದರು. ಶಾಸಕ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ವಿಷಕನ್ಯೆ ಎಂದು ಹೇಳಿದ ವಿಚಾರಕ್ಕೆ ವಿಷಕನ್ಯೆ ಅಷ್ಟೇ ಅಲ್ಲ ಮಟ್ಯಾಷ ಲೇಗ್ ಮತ್ತು ರಕ್ತ ಕಣ್ಣೀರು ಎಂದು ಬೆಳಗಾವಿ ಜನ ಮಾತಾಡುತ್ತಾರೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದಲು ಇದೆ. ಚುನಾವಣೆ ಆರು ತಿಂಗಳು ಇರುತ್ತಲೇ ಜೋರಾಗಿರುತ್ತದೆ. ಆ ಮಟ್ಯಾಷ ಲೇಗ್ನಿಂದ ಸಿದ್ದರಾಮಯ್ಯ ಮಾಜಿ ಆದರು, ಕುಮಾರಸ್ವಾಮಿ ಸರ್ಕಾರ ಹೋಯಿತು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್ ನಿಂದ ದೂರವಾದೆ. ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ. ರಮೇಶ ಜಾರಕಿಹೊಳಿಗೆ ಶಕ್ತಿ ಇದೆ ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ ಒಂದು ವರ್ಷದಿಂದ ನಮ್ಮ ಬೇಡಿಕೆ ಇದೆ ಸಿಬಿಐ ವಹಿಸಬೇಕು ಅಂತ ಇದೆ. ಅನೇಕರು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೆರಳದ ವರೆಗೆ ಇವರ ಲಿಂಕ್ ಇದೆ. ರಮೇಶ ಜಾರಕಿಹೊಳಿ ಅವರಿಗೆ ದಾಖಲೆ ಬಿಡುಗಡೆ ಮಾಡಬೇಡಿ ಸಿಬಿಐ ಕೊಡಿ ಎಂದು ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ಬಿಳಿಸಲು ಬೆಳಗಾವಿ ಶಾಸಕರು ಕಾರಣ. ಆ ಕ್ಷೇತ್ರದಲ್ಲಿ ನಮ್ಮ ಕುಟುಂಬದ ಅಭಿಮಾನಿಗಳು ೨೦ ಸಾವಿರ ಜನರಿದ್ದಾರೆ ಎಂದರು.
ಸಂತ್ರಸ್ತರೋ ಸಂತೃಪ್ತರೋ ಗೊತ್ತಾಗಲಿದೆ. ಬೇರೆಯವರಿಗೆ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕುಟುಂಬಸ್ಥರು, ಕ್ಷೇತ್ರದ ಜನ ಬೆನ್ನಿಗೆ ನಿಂತಿದ್ದಾರೆ. ರಮೇಶ ಜಾರಕಿಹೊಳಿ ನಿವೃತ್ತಿಗೆ ಜನ ಅವಕಾಶ ಕೊಡಲ್ಲ. ಸಿಬಿಐ ತನಿಖೆ ಆದರೇ ಲಂಚ, ಮಂಚ ಎಲ್ಲ ಹೊರಗೆ ಬರಲಿದೆ. ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಗೊತ್ತಾಗಲಿದೆ ಎಂದು ಗಂಭೀರ ಆರೋಪ ಮಾಡಿದರು.