ಬೆಳಗಾವಿ : ದಿನಾಂಕ:- 04 – 01 – 25 ಶನಿವಾರದಂದು ಮ.ನ. ರ. ಸಂಘದ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರಕವಿ , ರಸಋಷಿ ಕುವೆಂಪು ರವರ 120 ನೇ ಜಯಂತಿಯನ್ನು ಆಚರಿಸಲಾಯಿತು.
ವಿಶ್ವಮಾನವ ಸಂದೇಶವನ್ನು ಸಾರಿದ ಕುವೆಂಪು ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಡಾ. ಎಮ್. ಬಿ. ನರಸಣ್ಣವರ ಸಹಾಯಕ ಪ್ರಾಧ್ಯಾಪಕರು ಸಾಗರ ಶಿಕ್ಷಣ ಮಹಾವಿದ್ಯಾಲಯ ರವರು ಕುವೆಂಪು ರವರ ಆಶಯದಂತೆ ಅಲ್ಪಮಾನವನನ್ನು ವಿಶ್ವ ಮಾನವನ್ನಾಗಿಸುವ ಶಕ್ತಿ ಶಿಕ್ಷಕರಿಗಿದೆ, ಕುವೆಂಪು ರವರ ಕನ್ನಡ ಪ್ರೇಮ, ಪ್ರಕೃತಿಪ್ರೇಮ, ಮಾನವ ಪ್ರೇಮ ಸರ್ವರಿಗೂ ಆದರ್ಶವಾಗಿದೆ. ಕುವೆಂಪು ರವರ ಬರಹ – ಸಾಹಿತ್ಯ
ದಲ್ಲಿ ಕಂಡು ಬರುವ ವೈಚಾರಿಕತೆ, ವಾಸ್ತವಿಕ ಚಿಂತನೆ, ವೈಜ್ಞಾನಿಕ ಮನೋಭಾವ, ಮನೋವೈಜ್ಞಾನಿಕ ಜ್ಞಾನ, ಶುದ್ಧ ಆಧ್ಯಾತ್ಮಿಕತೆ, ನೈತಿಕತೆ, ಗುರು ಶಿಷ್ಯ ಪರಂಪರೆಯೂ ಕರುನಾಡಿನ ಸಾಂಸ್ಕೃತಿಕ ಹಾಗೂ ಸಾಹಿತ್ಯಕ , ಸಾಮಾಜಿಕ ಪರಂಪರೆಯ ಮೇಲೆ ಅಗಾಧವಾಗಿ ಪ್ರಭಾವ ಬೀರಿದೆ. ಬದುಕಿನ ಗುರಿಗಳಿಗೆ ಶಾಂತತೆ ರಸ ತುಂಬುವ ಅದ್ಭುತ ಶಕ್ತಿ ಕುವೆಂಪು ರವರ ಸಾಹಿತ್ಯಕ್ಕಿದೆ. ಕುವೆಂಪು ರವರ ಸಾಹಿತ್ಯದ ವಿವಿಧ ಪ್ರಕಾರಗಳನ್ನು ತಾರ್ಕಿಕವಾಗಿ ವಿಶ್ಲೇಷಿಸಿದರು. ಶ್ರೀ ರಾಮಾಯಣ ದರ್ಶನಂ ಕೃತಿಯ ಮೂಲ ತತ್ವಗಳನ್ನು ವಿಮರ್ಶಿಸಿದರು. ಕುವೆಂಪು ರವರ ಜೀವನ ಹಾಗೂ ಬರಹಗಳನ್ನು ಭಾವೀ ಶಿಕ್ಷಕರು ಅಳವಡಿಸಿಕೊಳ್ಳುವುದು ಪ್ರಸ್ತುತ ಹಾಗೂ ಎಂದೆಂದಿಗೂ ಅವಶ್ಯಕವಾಗಿದೆ ಎಂದು ಹೇಳಿದರು.
ಡಾ.ನಿರ್ಮಲಾ ಜಿ ಬಟ್ಟಲ ಪ್ರಾಚಾರ್ಯೆ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇವತ್ತಿನ ಜಗತ್ತಿಗೆ ಬೇಕಾದ ಅವಶ್ಯಕ ಮೌಲ್ಯಗಳನ್ನು ಕುವೆಂಪು ರವರ ಸಾಹಿತ್ಯದಲ್ಲಿ ಕಾಣಬಹುದು. ವಿಶ್ವ ಪಥ, ಮನುಜಮತ ಎಂದು ಸಾರಿದ್ದ ಕುವೆಂಪು ರವರು ವೈದಿಕತೆಯ ಪ್ರೇರಿತ ಅನಾಗರೀಕ, ಮೌಡ್ಯ ಆಚರಣೆಗಳನ್ನು ತಮ್ಮ ವೈಚಾರಿಕ ಚಿಂತನೆಯ ಮೂಲಕ ವಿರೋಧಿಸಿದರು. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ದಿಕ್ಕರಿಸಿ ಎಲ್ಲರೂ ಒಂದು ಎಂಬ ಮನೋಭಾವದಿಂದ ನಾವು ಜೀವಿಸಿದಾಗ ವಿಶ್ವಮಾನವರಾಗಲೂ ಸಾಧ್ಯವಾಗುವುದು. ಕುವೆಂಪು ರವರ ಕಾವ್ಯದಲ್ಲಿನ ನೈತಿಕ ಹಾಗೂ ಮೌಲ್ಯಾಧಾರಿತ ಅಂಶಗಳನ್ನು ದೃಷ್ಟಾಂತಗಳ ಮೂಲಕ ವಿಶ್ವಮಾನವ ಕುವೆಂಪುರವರ ಸಂದೇಶವನ್ನು ಹೇಳಿದರು.
ವಿಶೇಷ ಉಪನ್ಯಾಸಕರಾದ ಡಾ. ಎಮ್. ಬಿ. ನರಸಣ್ಣವರರಿಗೆ ಮಹಾವಿದ್ಯಾಲಯದ ಪರವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಉಪಾಧ್ಯಕ್ಷರಾದ ಡಾ. ಎಸ್. ವಿ. ವಾಲಿಶೆಟ್ಟಿ, ಕನ್ನಡ ಪ್ರಾಧ್ಯಾಪಕಿ ಪ್ರೊ. ರೂಪಾ ಅಕ್ಕಿ ಮತ್ತು ಸೋನಲ್ ಚಿನಿವಾಲ , ಪ್ರೊ. ಸುನಿಲ ಪಾಣಿ , ಡಾ.ಗೀತಾ ದಯಣ್ಣವರ ಪ್ರೊ.ಮಂಜುನಾಥ ಕಲಾಲ, ಪ್ರೊ.ಮಲ್ಲಿಕಾರ್ಜುನ ಜಮಖಂಡಿ ಹಾಗೂ ಎಲ್ಲ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಸಾವಿತ್ರಿ ಕುಲಕರ್ಣಿ ರವರ ತಂಡ ಪ್ರಾರ್ಥನೆ ಮಾಡಿದರು.
ಸ್ವಾಗತ ಹಾಗೂ ಅತಿಥಿ ಪರಿಚಯವನ್ನು ಪ್ರಶಿಕ್ಷಣಾರ್ಥಿ ಮಹೇಶ ಪಾಟೀಲ ನೇರವೇರಿಸಿದರು. ಪ್ರಶಿಕ್ಷಣಾರ್ಥಿ ಗೌರವ್ವ ಮಿಸಿನಾಯ್ಕ ಹಾಗೂ ನಾಗರಾಜ ಅವರ ತಂಡ ಕುವೆಂಪು ರವರು ರಚಿಸಿದ ಕಾವ್ಯಗಳನ್ನು ಹಾಡಿದರು. ಪ್ರಶಿಕ್ಷಣಾರ್ಥಿ ಪೂಜಾ ದೊಡ್ಡಬೊಮ್ಮನವರ ನಿರೂಪಿಸಿದರು. ಗೌರವ್ವ
ರವರು ವಂದಿಸಿದರು.