ಬೆಳಗಾವಿ :
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶುಕ್ರವಾರ ಬೆಳಗಾವಿಗೆ ಆಗಮಿಸಿದ್ದಾರೆ. ಅಭಿಮಾನಿಗಳು ಅವರಿಗೆ ಭರ್ಜರಿ ಸ್ವಾಗತ ಕೋರಿದರು. ಶಿವರಾಜ್ ಕುಮಾರ್ ಹಾಗೂ ಅವರ ಧರ್ಮಪತ್ನಿ ಗೀತಾ ಅವರು ಶಿವಬಸವ ನಗರದಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಕುಂದಾ ಸವಿದರು. ವೇದ ಚಿತ್ರದ ಪ್ರಚಾರಾರ್ಥ ಶಿವರಾಜ್ ಕುಮಾರ್ ಬೆಳಗಾವಿಗೆ ಆಗಮಿಸಿದ್ದಾರೆ. ಚನ್ನಮ್ಮ ವೃತ್ತದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಳ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ರೋಡ್ ಶೋ ಮೂಲಕ ಚಿತ್ರಾ ಚಲನಚಿತ್ರ ಮಂದಿರಕ್ಕೆ ಭೇಟಿ ನೀಡಿದರು.