ಬೆಂಗಳೂರು :
ರಾಜ್ಯದ ಕೆಲವು ಕಾಲೇಜುಗಳ ಪರೀಕ್ಷೆಗಳು ನಡೆಸದ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ನೀಡಲಾದ ಕೆಎಸ್ಆರ್ಟಿಸಿ ಬಸ್ ಪಾಸ್ ಗಳ ಅವಧಿಯನ್ನು ಅಕ್ಟೋಬರ್ ಅವರಿಗೆ ವಿಸ್ತರಿಸಲಾಗಿದೆ.
ಪದವಿ, ಸ್ನಾತಕೋತರ ಪದವಿ, ಎಂಜಿನಿಯರಿಂಗ್, ಕಾನೂನು ಬಿ ಫಾರ್ಮ್ ಮುಂತಾದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪದವಿ ಪೂರ್ಣಗೊಂಡಿಲ್ಲ. ಪರೀಕ್ಷೆ ಇರುವುದರಿಂದ ಅವಧಿ ವಿಸ್ತರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪಾಸ್ ಅವಧಿಯನ್ನು ಅಕ್ಟೋಬರ್ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪಾಸ್ ಅವಧಿಯನ್ನು ವಿಸ್ತರಿಸಲು ಹಳೆಯ ಬಸ್ ಪಾಸುಗಳನ್ನು ಸಲ್ಲಿಸಿ ಪಾಸ್ ಅವಧಿ ವಿಸ್ತರಿಸಲು ಹಣ ಕಟ್ಟಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.