ಗುವಾಹಟಿ :
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಬಿರುಗಾಳಿಯ ಬ್ಯಾಟಿಂಗ್ ನಡೆಸಿದ್ದಾರೆ ಅವರು ಇಂದು ಶ್ರೀಲಂಕಾ ವಿರುದ್ಧ ನಡೆದ ಏಕದಿನ ಪಂದ್ಯಾವಳಿಯಲ್ಲಿ ಅಮೋಘ ಶತಕ ಬಾರಿಸುವ ಮೂಲಕ ತಾವೊಬ್ಬ ಶ್ರೇಷ್ಠ ಬ್ಯಾಟ್ಸ್ಮನ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ . ಕೊಹ್ಲಿಗೆ ಇದು ತಮ್ಮ ವೃತ್ತಿ ಜೀವನದ 45 ನೇ ಶತಕ ಮತ್ತು ತವರಿನಲ್ಲಿ 20 ನೇ ಶತಕ. ಈ ಮೂಲಕ ತವರಿನಲ್ಲಿ ಅತ್ಯಧಿಕ ಶತಕ ಹೊಡೆದಿದ್ದ ಸಚಿನ್ ( 20 ಶತಕ ) ದಾಖಲೆಯನ್ನು ಕೊಹ್ಲಿ ಸರಿಗಟ್ಟಿದರು. ಸಚಿನ್ 164 ಪಂದ್ಯಗಳಲ್ಲಿ ಈ ದಾಖಲೆ ಮಾಡಿದ್ದರೆ , ಕೊಹ್ಲಿ ಕೇವಲ 101 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ . 2019 ರಲ್ಲಿ ಆಸೀಸ್ ವಿರುದ್ಧ ತವರಿನಲ್ಲಿ ಕೊಹ್ಲಿ ಕೊನೆಯ ಸೆಂಚುರಿ ಹೊಡೆದಿದ್ದರು.
ವಿರಾಟ್ ಕೊಹ್ಲಿ ಇಂದು ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಒಂದು ಭರ್ಜರಿ ಸಿಕ್ಸರ್, 12 ಬೌಂಡರಿಗಳ ನೆರವಿನಿಂದ ಅಜೇಯ 112 ರನ್ನು ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ.