ಬೆಳಗಾವಿ :
ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಪ್ರಸನ್ನ ಬಾಲಚಂದ್ರ ವಾರಲೆ ಅವರ ಹುಟ್ಟೂರು ನಿಪ್ಪಾಣಿ ಎನ್ನುವುದು
ಇದೀಗ ಇಡೀ ಬೆಳಗಾವಿ ಜಿಲ್ಲೆಗೆ ಇದೀಗ ಕೋಡು ಮೂಡಿಸಿದೆ. ನ್ಯಾಯಮೂರ್ತಿ ವಾರಾಲೆ ಅವರು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಜೂನ್ 23,1962 ರಂದು ಜನಿಸಿದ್ದರು. ನಂತರ ಅವರು ಔರಂಗಬಾದ್ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು 1985 ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು.
90 ರ ದಶಕದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. 2008 ರ ಜುಲೈ 18 ರಂದು ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠದಲ್ಲಿ ಸಹಾಯಕ ಸರ್ಕಾರಿ ಪ್ಲೀಡರ್, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಕೇಂದ್ರ ಸರಕಾರದ ಹೆಚ್ಚುವರಿ ವಕೀಲರಾಗಿ ಅವರು ಸೇವೆ ಸಲ್ಲಿಸಿದ್ದರು.
ಒಟ್ಟಾರೆ ಇದೀಗ ನೂತನ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವಾರಲೆ ಅವರು ಬೆಳಗಾವಿ ಜಿಲ್ಲೆಯವರು ಎನ್ನುವುದು ಇಡೀ ಜಿಲ್ಲೆಯ ಜನತೆಗೆ ಸಂತಸದ ತಂದಿದೆ. ಬೆಳಗಾವಿಯಲ್ಲಿ ಕರ್ನಾಟಕ ಕಾನೂನು ಸಂಸ್ಥೆ ಈ ಭಾಗದಲ್ಲಿ ಮೊಟ್ಟ ಮೊದಲಿಗೆ ಅಂದರೆ 1939 ರಲ್ಲೇ ಕಾನೂನು ಕಾಲೇಜು ಆರಂಭಿಸಿತ್ತು ಎನ್ನುವುದು ಇನ್ನೊಂದು ಹೆಮ್ಮೆ. ಒಟ್ಟಾರೆ ಜಿಲ್ಲೆಗೆ ಕಾನೂನು ಕ್ಷೇತ್ರದಲ್ಲಿ ಇದೀಗ ನೂತನ ಸಿಜೆ ಪ್ರಸನ್ನ ಬಾಲಚಂದ್ರ ವಾರಲೆ ಮತ್ತಷ್ಟು ಕೀರ್ತಿ ತಂದಿದ್ದಾರೆ.