ಬೀದರ್: ಕೋಡಿಮಠದ ಡಾ. ಶಿವಾನಂದ ಸ್ವಾಮೀಜಿ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಆಗದು, ಏನಿದ್ದರೂ ಬಜೆಟ್ ನಂತರ. ಯುಗಾದಿವರೆಗೂ ಬದಲಾವಣೆ ಕಷ್ಟ ಎಂದು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿರುವ ಅವರು, ಹಾಲುಮತ ಸಮಾಜ ಪ್ರಾಚೀನ, ದೈವಗೊಳ್ಳುವ ಸಮಾಜವಾಗಿದೆ. ಈ ಸಮಾಜದಿಂದ ಸಿದ್ಧರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾರೆ. ಹಾಲು ಮತದವರ ಕೈಯಿಂದ ಅಧಿಕಾರ ಬಿಡಿಸಿಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟು ಕೊಟ್ಟರೆ ಬೇರೆಯವರು ಮುಖ್ಯಮಂತ್ರಿ ಆಗಬಹುದು. ಆದರೆ, ಅವರು ಬಿಟ್ಟು ಕೊಡಲ್ಲ, ಇಳಿಯೋದು ಇಲ್ಲ ಎಂದರು.
ಯುಗಾದಿ ನಂತರ ಸಿಎಂ ಬದಲಾವಣೆ ಬಗ್ಗೆ ಹೇಳುವೆ. ಡಿ.ಕೆ. ಶಿವಕುಮಾರ ನಮಗೆ ಪರಿಚಯಸ್ಥರು. ಅವರ ಕುರಿತು ಹೇಳಲು ಸದ್ಯಕ್ಕೆ ಏನೂ ಇಲ್ಲ ಎಂದು ತಿಳಿಸಿದರು.
2026 ರಲ್ಲಿ ದೇಶಕ್ಕೆ ಅಪಾಯ ಇದೆ, 2025ಕ್ಕಿಂತ 10 ಪಟ್ಟು ಹೆಚ್ಚಿನ ಅಪಾಯ ಎದುರಾಗಲಿದೆ. ಸಾವು- ನೋವುಗಳು ಆಗುವ ಲಕ್ಷಣಗಳಿವೆ. ಇಬ್ಬರು ಮಹಾನ್ ವ್ಯಕ್ತಿಗಳು ಸಾಯುವ ಲಕ್ಷಣಗಳಿವೆ. ಜಾಗತಿಕವಾಗಿ ದೇಶಗಳು ನಾಶವಾಗುತ್ತವೆ. ಮಳೆ- ಬೆಂಕಿ ಸುರಿಯಲಿದೆ.ರಾಜ್ಯಕ್ಕೆ ಒಳ್ಳೆಯದು ಇದ್ದು, ಮಳೆ ಬೆಳೆ ಚೆನ್ನಾಗಿದ್ದರೂ, ಸಂಕ್ರಾಂತಿ ಶುಭ ಕಾಣುತ್ತಿಲ್ಲ ಎಂದು ಹೇಳಿದರು.


