ಕಿತ್ತೂರು ಸೊಸೆ ಹಿರೇಬಾಗೇವಾಡಿಯಿಂದ ನಾಪತ್ತೆ..!
ಬೆಳಗಾವಿ : ಜಿಲ್ಲೆಯ ಕಿತ್ತೂರ ತಾಲೂಕಿನ ಮಲ್ಲಾಪೂರ ಎತ್ತಿನಕೇರಿ ಗ್ರಾಮದ 26 ವರ್ಷದ ಮಧು ಸುರೇಶ ವಾಲಿಕರ ಎಂಬ ಮಹಿಳೆ ತನ್ನ ಗಂಡನಮನೆಯಿಂದ ತವರು ಮನೆಯಾದ ಹಿರೇಬಾಗೇವಾಡಿ ಗ್ರಾಮದ ಕಮಲವ್ವ ಬಾಬು ಎಮ್ಮೆಟಕರ ಎಂಬುವರ ಮನೆಯಿಂದ ದಿನಾಂಕ 7 ನವೆಂಬರ್ 2022 ರಂದು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೊರಗಡೆ ಹೋಗಿ ಎಲ್ಲಿಯೂ ಕಾಣೆಯಾಗಿದ್ದಾಳೆ.
ಈ ಕುರಿತು ಆಕೆಯ ತವರು ಮನೆಯವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಕೆಯ ಬಗ್ಗೆ ಮಾಹಿತಿ ಸಿಕ್ಕವರು ತಕ್ಷಣ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಂಟ್ರೋಲ್ ರೂಮ್- 0831-2405278
ಪಿಐ -9480804032
ಪಿಎಸ್ಐ-9611704143