ಬೆಳಗಾವಿ :
ಜಿಲ್ಲಾಡಳಿತದಿಂದ ಕಿತ್ತೂರ ಉತ್ಸವವನ್ನು ಅ.23 ರಿಂದ ಅ.25 ರ ವರೆಗೆ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಉತ್ಸವಕ್ಕೆ ಗಣ್ಯರು, ಶಾಲಾ ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ಲಕ್ಷಾಂತರ ಜನ ಭಾಗವಹಿಸುತ್ತಾರೆ.
ಉತ್ಸವವನ್ನು ಸುಗಮವಾಗಿ ನಡೆಸಲು ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಕಿತ್ತೂರು ಪಟ್ಟಣದಲ್ಲಿ ಅಕ್ಟೊಬರ್ 24 ರಂದು ನಡೆಯುವ ಸೋಮವಾರ ಪೇಟೆ ಸಂತೆಯನ್ನು ಹಾಗೂ ಜಾನುವಾರ ಸಂತೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.