ಬೆಳಗಾವಿ : ಅಥಣಿಯಲ್ಲಿ ನಡೆದ ಮಕ್ಕಳಿಬ್ಬರ ಅಪಹರಣ ಕೊನೆಗೂ ಸುಖಾಂತ್ಯಗೊಂಡಿದೆ. ಘಟನಿಗೆ ಮಕ್ಕಳ ತಂದೆಯ ಹಣಕಾಸಿನ ವ್ಯವಹಾರ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.
ಬೆಳಗಾವಿಯಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಎಸ್ ಪಿ ಭೀಮಶಂಕರ ಗುಳೇದ ಅವರು, ತಂದೆಯ ಹಣಕಾಸಿನ ವ್ಯವಹಾರದ ಕಾರಣ ಮಕ್ಕಳನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಹಣ ವಾಪಸ್ ನೀಡದೇ ಇರುವುದಕ್ಕೆ ಕಿಡ್ನ್ಯಾಪ್ ಮಾಡಿಸಲಾಗಿದೆ. ಈ ಮೂವರು ಸುಪಾರಿ ಪಡೆದು ಕಿಡ್ನ್ಯಾಪ್ ಮಾಡಲಾಗಿದೆ.
ಅಪಹರಣಕಾರರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಅವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಮಕ್ಕಳ ತಂದೆ ಜೊತೆಗಿನ ಹಣಕಾಸಿನ ವ್ಯವಹಾರ ಇತ್ತು. ಈ ಕಾರಣಕ್ಕೆ ಮಕ್ಕಳನ್ನು ಅಪಹರಿಸಿ ನಂತರ ತಂದೆಗೆ ಕರೆ ಮಾಡಿ ಮಕ್ಕಳ ಬಿಡುಗಡೆಗೆ ಹಣ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದರು. ಅಥಣಿ ಮತ್ತು ಐಗಳಿ ಪೊಲೀಸರು ಅಪಹರಣಕಾರರನ್ನು ಬಂಧಿಸಲು ಹೋದಾಗ ಅವರು ನಮ್ಮ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇಬ್ಬರು ಪೊಲೀಸರು ಗಾಯಗೊಂಡಿದ್ದು ಅವರ ಯೋಗ ಕ್ಷೇಮ ವಿಚಾರಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.