This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Crime NewsState News

ಕುಂದಾ ನಗರಿ ಕಾಳಸಂತೆಯಲ್ಲಿ ಕ್ಷೀರಭಾಗ್ಯ…! ಬಡ ಮಕ್ಕಳ ಹಾಲಿನ ಪೌಡರ್, ಸ್ವೀಟ್ ಮಾರ್ಟ್ ಗಳ ಪಾಲು..!


  • ಬಡವರ ಮಕ್ಕಳಿಗೆ ಸೇರಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಕಾಳಸಂತೆಯಲ್ಲಿ ಮಾರಾಟ..!

ಜನಜೀವಾಳ ಜಾಲ : ಬೆಳಗಾವಿ ತಾಲೂಕಿನ ಹಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗುರುಸಿದ್ದೇಶ್ವರ ಸ್ವೀಟ್ಸ್ ಅಂಗಡಿ ಮೇಲೆ ದಾಳಿ ಮಾಡಲಾಗಿದೆ.

ಖಚಿತ ಮಾಹಿತಿ ಆಧರಿಸಿ ಸ್ವೀಟ್ಸ್ ಮಾರ್ಟ್ ಅಂಗಡಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗ್ರಾಮಿಣ ಹಾಗೂ ನಗರ  ಅಧಿಕಾರಿಗಳು ಹಾಗೂ ಬಾಗೇವಾಡಿ ಪೋಲಿಸರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಕೂಡಿಟ್ಟ ಕ್ಷೀರ ಭಾಗ್ಯ ಯೋಜನೆಯ 32 ಕೆಜಿ ಹಾಲಿನ ಪೌಡರ್ ಜಪ್ತಿ ಮಾಡಲಾಗಿದೆ.

ಬಡವರ ಮಕ್ಕಳಿಗೆ ಪೌಷ್ಟಿಕ ಕೊರತೆ ನಿವಾರಿಸಲು ಸರ್ಕಾರದಿಂದ ಕ್ಷೀರ ಭಾಗ್ಯ ಯೋಜನೆ ಜಾರಿಗೆ ಮಾಡಿತ್ತು. ಆದರೆ ಬಡವರ ಮಕ್ಕಳಿಗೆ ಸೇರಬೇಕಾದ ಹಾಲಿನ ಪೌಡರ್ ಕೆಲವು ಸ್ವೀಟ್ ಮಾರ್ಟ್ ಅಂಗಡಿಗಳಲ್ಲಿ ಕವಾ ಹಾಗೂ ಇನ್ನಿತರ ಪೇಡೆಗಳನ್ನ ತಯಾರಿಸಲು ಬಳಕೆ ಮಾಡ್ಲಾಗುತ್ತಿದೆ.

ಹಾಲಿನ ಪೌಡರ್ ಸೀಜ್ ಮಾಡಿ ಅಂಗಡಿ ಮಾಲೀಕರ ವಿರುದ್ಧ ಹಿರೇಬಾಗೇವಾಡಿ ಪೋಲಿಸ್ ಠಾಣೆ PI ವಿಜಯಲಯಮಾರ, ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ನಂದಿ ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.


Jana Jeevala
the authorJana Jeevala

Leave a Reply