This is the title of the web page
This is the title of the web page

Live Stream

March 2023
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಖಾನಾಪುರ ತಾಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆ Khanapur taluk level verse memorization competition


 

ಖಾನಾಪುರ :
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಖಾನಾಪುರ ಕನ್ನಡ ವಿಭಾಗ ಹಾಗೂ ಸಂಚಾರಿ ಗುರುಬಸವ ಬಳಗ ಬೆಳಗಾವಿ ವತಿಯಿಂದ ಖಾನಾಪುರ ತಾಲೂಕು ಮಟ್ಟದ ವಚನ ಕಂಠಪಾಠ ಸ್ಪರ್ಧೆಯನ್ನು ನಡೆಸಲಾಯಿತು.

ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕುಮಾರಿ ಹಷಾ೯ ಕಡೆಮನಿ (ಪ್ರಥಮ) ಕುಮಾರಿ ಕಾವೇರಿ ಪನಸೂಡಕರ(ದ್ವಿತೀಯ)
ಕುಮಾರಿ ಪ್ರೀಯಾ ಪಜೋಳ್ಳಿ (ತ್ರತೀಯ) ಹಾಗೂ ಭಾಗವಹಿಸಿದ ಸ್ಪರ್ಧಾ ಗಳಿಗೆ ಪ್ರಶಸ್ತಿ ಪ್ರದಾನ ವಿತರಿಸಿ ಮಾತನಾಡಿದ ಪ್ರಾಚಾರ್ಯ ಡಾ.ಡಿ ಎಂ. ಜವಳಕರ ಅವರು ಶರಣರು ವರ್ಗ, ಜಾತಿ ರಹಿತ ಸಮಾನತೆಯ ತಳಹದಿಯ ಮೇಲೆ ಮಾನವತವಾದದ ಸಿದ್ಧಾಂತವನ್ನು ಮೈಗೂಡಿಸಿಕೊಂಡು .ತಮ್ಮ ಲ್ಲಿ ಕನಸನ್ನು ಕಟ್ಟಿಕೊಂಡು ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದವರೆಂದರು. ಬಹುಮಾನ ದಾಸೋಹಿಗಳಾದ ಬಸವರಾಜ ಹುಲಮನಿಯವರು ಮಾತನಾಡುತ್ತಾ ಶರಣ ಸಂಸ್ಕೃತಿ ನಮ್ಮ ನಿಜವಾದ ನೆಲಮೂಲ ಸಂಸ್ಕೃತಿ ಆಗಬೇಕು. ಅದಕ್ಕಾಗಿ ಯುವಕರಲ್ಲಿ ಶರಣರ ನಡೆನುಡಿ ಕಾಯಕ ಸಿದ್ಧಾಂತ ದಾಸೋಹ ಸಮಾನತೆಗಳಂತ ಮಾನವೀಯ ಮೌಲ್ಯಗಳನ್ನು ನಾವು ಬೆಳೆಸಬೇಕಾಗಿದೆ ಎಂದರು. ಗುರುಬಸವ ಬಳಗ ಬೆಳಗಾವಿ ಸಂಚಾಲಕರಾದ ಶರಣ ಮಹಾಂತೇಶ್ ತೋರಣಗಟ್ಟಿ ಯವರು ಬಸವಣ್ಣ ಹಾಗೂ ಶರಣರನ್ನು ಧಾರ್ಮಿಕ ಚೌಕಟ್ಟಿನಾಚೆಯೂ ನಾವು ನೋಡಬೇಕಾಗಿದೆ, ಅಂದರೆ ಶರಣರ ವಿಶಾಲ ಆಲೋಚನೆಗಳು ನಮ್ಮ ಜಗತ್ತಿನಲ್ಲಿ ಹರಡುತ್ತವೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕೌಶಲ್ಯ ಡಿ ಯವರು ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಡಾ. ಅಡಿವೆಪ್ಪ ಇಟಗಿ ಅವರು ಕಾರ್ಯಕ್ರಮ ನಿರೂಪಿಸಿ ವಂದನೆಗಳನ್ನು ಸಲ್ಲಿಸಿದರು. ತಾಲೂಕಿನ ಹೈಸ್ಕೂಲ್ ಕಾಲೇಜ್ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು .ತೀರ್ಪುಗಾರರಾಗಿ ಪ್ರವೀಣ ರೊಟ್ಟಿ , ಬಿ ಪಿ ಜೇವನಿ, ವಿಜಯಲಕ್ಷ್ಮಿ ಜೇವನಿ,ವಿಜಯ್ ಪೂಜಾರಿ ಶಿಕ್ಷಕರಾದ ಬಸವರಾಜ ಜಕಾತಿ, ಶ್ರೀಮತಿ ರಾಜೇಶ್ವರಿ ದಯನ್ನವರ, ಸುಮಾ ತೋರಣಗಟ್ಟಿ,ಉಪನ್ಯಾಸಕರಾದ ಚಂದ್ರಶೇಖರ್ ಹಿರೇಮಠ ವಿದ್ಯಾರ್ಥಿ ಮುಖಂಡರಾದ ನಯನಾ ಹಂಚಿನಮನಿ, ಸೋಯಲ್, ಅಶ್ವಿನಿ ಕಾಂಬಳೆ, ನಿಖಿತಾ ಘಾಟಗಿ ಮುಂತಾದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ನಗರದ ಪ್ರಮುಖ ನಾಗರಿಕರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply