ಬೆಳಗಾವಿ: ಪಣಜಿ ಹೈವೆ ಕಾಮಗಾರಿ ಮಾಡುತ್ತಿರುವ ಯಶಸ್ವಿ ರೋಡ್ ವರ್ಕ್ಸ್ ಕಂಪನಿಯಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದ ಜಟ್ಟೆಪ್ಪಾ @ ರವಿ ಶರಣಪ್ಪಾ ಹಿರೇಕುರಬರ, ವಯಾ: 35 ವರ್ಷ, ಸಾ: ಅಸ್ಥಿ, ತಾ: ತಾಳಿಕೋಟಿ, ಜಿ: ವಿಜಯಪುರ ಇವನಿಗೆ ದಿನಾಂಕ: 26/03/2024 ರಂದು ರಾತ್ರಿ 09 ಗಂಟೆಯ ಸುಮಾರಿಗೆ ಖಾನಾಪುರ ತಾಲೂಕಿನ ಮಾಡಿಗುಂಜಿ ಗ್ರಾಮ ಹದ್ದಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಜಯಕುಮಾರ ತಂದೆ ನಿಂಗಣ್ಣಾ, ವಯಾ: 27 ವರ್ಷ. ಸಾ: ತೇವರ ವಡಗೇರ, ಜಿ: ಯಾದಗಿರಿ ಮತ್ತು ಯಲ್ಲಪ್ಪ ತಂದೆ ಜಟ್ಟೆಪ್ಪಾ, ವಯಾ: 35 ವರ್ಷ. ಸಾ: ಗುಂಡಲಗೇರ, ತಾ: ಹುಣಸಗಿ, ಜಿ: ಯಾದಗಿರಿ ಇವರು ಹಲ್ಲೆಗೈದು ಕೊಲೆ ಮಾಡಿರುತ್ತಾರೆ. ಮೃತನ ತಾಯಿಯು ದಿನಾಂಕ: 28-03-2024 ರಂದು ನೀಡಿದ ದೂರಿನ ಮೇರೆಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಸ್ಪಿ ಡಾ: ಭೀಮಾಶಂಕರ ಗುಳೇದ ಈ ಪ್ರಕರಣದಲ್ಲಿಯ ಆರೋಪಿತರಿಬ್ಬರ ಶೀಘ್ರ ಬಂಧನಕ್ಕಾಗಿ ವಿಶೇಷ ತನಿಖಾ ತಂಡ ರಚಿಸಿದ್ದರು.
ಈ ವಿಶೇಷ ತನಿಖಾ ತಂಡವು ದಿನಾಂಕ: 29-03-2024 ರಂದು ಇಬ್ಬರು ಆರೋಪಿತರಿಗೆ ಯಾದಗಿರಿ ಜಿಲ್ಲೆಯಲ್ಲಿ ಪತ್ತೆ ಮಾಡಿಕೊಂಡು ಬಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿರುತ್ತಾರೆ.
ಈ ವಿಶೇಷ ತನಿಖಾ ತಂಡದ ಕಾರ್ಯಚರಣೆಯನ್ನು ರವಿ ಡಿ ನಾಯ್ಕ, ಡಿ.ಎಸ್.ಪಿ ಬೈಲಹೊಂಗಲ ಮಾರ್ಗದರ್ಶನದಲ್ಲಿ ರಾಮಚಂದ್ರ ನಾಯಕ ಪೋಲೀಸ್ ಇನ್ಸ್ಪೆಕ್ಟರ್ ಖಾನಾಪುರ ಪೊಲೀಸ್ ಠಾಣೆ ರವರು ಖಾನಾಪುರ ಪೊಲೀಸ್ ಠಾಣೆಯ ಗಿರೀಶ ಎಂ. ಪಿ.ಎಸ್.ಐ. ಎ.ಒ ನಿರಂಜನಸ್ವಾಮಿ, ಎ.ಎಸ್.ಐ ಸಿಬ್ಬಂದಿಗಳಾದ ಜಗದೀಶ ಕಾದ್ರೋಳ್ಳಿ, ಗುರುರಾಜ ತಮದಡ್ಡಿ, ಈಶ್ವರ ಜಿನ್ನವ್ವಗೋಳ, ಮಂಜುನಾಥ ಮುಸಳಿ, ಬೆಳಗಾವಿ ಜಿಲ್ಲಾ ಪೊಲೀಸ್ ಕಾರ್ಯಾಲಯದ ಟೆಕ್ನಿಕಲ್ ವಿಭಾಗದ ವಿನೋದ ಠಕ್ಕನ್ನವರ, ಸಚಿನ್ ಪಾಟೀಲ ರವರೊಂದಿಗೆ ಕೈಗೊಂಡಿರುತ್ತಾರೆ.