ಖಾನಾಪುರ : ಡಿಸಿಸಿ ಬ್ಯಾಂಕ್ ಚುನಾವಣೆಗೆ ಖಾನಾಪುರ ತಾಲೂಕಿನಿಂದ ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಅವರ ಹೆಸರು ಅಂತಿಮಗೊಂಡಿದೆ.
ಈ ಬಗ್ಗೆ ಗುರುವಾರ ಖಾನಾಪುರ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ವ ಪಕ್ಷಗಳ ಪ್ರತಿನಿಧಿಗಳಿಂದ 10 ಸದಸ್ಯರಿಂದ ರಚಿಸಲಾದ ಆಯ್ಕೆ ಸಮಿತಿಯ ಅಧ್ಯಕ್ಷ ಯಶವಂತ ಬಿರ್ಜೆ ಅವರು ಮಾಹಿತಿ ನೀಡಿದರು. ಡಿಸಿಸಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಲುವಾಗಿ ಸಮಿತಿಯನ್ನು ರಚಿಸಲಾಗಿತ್ತು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಠ್ಠಲ ಹಲಗೇಕರ ಮತ್ತು ಸಮಾಜಸೇವಕ ರಾಜು ಸಿದ್ದಾಣಿ ಅವರ ಹೆಸರು ಪ್ರಸ್ತಾಪವಾಗಿತ್ತು. ಆದರೆ ಆಗಸ್ಟ್ 27 ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದ ಮೂಲಕ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾಹಿತಿ ಲಭಿಸಿದೆ. ಇದೀಗ ಉಳಿದವರರು ಶಾಸಕ ವಿಠ್ಠಲ ಹಲಗೇಕರ ಮತ್ತುರಾಜು ಸಿದ್ಧಾಣಿ ಅವರ ಬಗ್ಗೆ ಚರ್ಚೆ ನಡೆದ ನಂತರ ವಿಠ್ಠಲ ಹಲಗೇಕರ ಅವರ ಹೆಸರನ್ನು ಅಂತಿಮವಾಗಿ ಅಧಿಕೃತವಾಗಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಒಟ್ಟು 55 ಪಿಕೆಪಿಎಸ್ ಸಹಕಾರ ಸಂಘಗಳು ಮತದಾನಕ್ಕೆ ಅರ್ಹತೆ ಪಡೆದಿವೆ. ಆದರೆ, ಬಹುಮತಕ್ಕೆ ಕನಿಷ್ಠ 28 ಸಂಘಗಳ ಬೆಂಬಲ ಅವಶ್ಯ. ಪ್ರಸ್ತುತ ನಮ್ಮ ಬಳಿ 35 ಸಂಘಗಳ ಬೆಂಬಲ ಇರುವುದರಿಂದ ನಮ್ಮ ಜಯ ನಿಶ್ಚಿತ ಎಂದು ಅವರು ತಿಳಿಸಿದರು.
ಶಾಸಕ ವಿಠ್ಠಲ ಹಲಗೇಕರ, ಗರ್ಲಗುಂಜಿ ಪಿಕೆಪಿಎಸ್ ಅಧ್ಯಕ್ಷ ರಾಜು ಸಿದ್ದಾಣಿ, ಸಮಾಜ ಸೇವಕ ಇರ್ಫಾನ್ ತಾಳಿಕೋಟಿ, ಶಿವಸೇನೆ ನಾಯಕ ಪಿ.ಕೆ. ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಲಕ್ಷ್ಮಣ ಕಸಬೇಕರ, ಮಹಾದೇವ ಘಾಡಿ, ಭರಮಾಣಿ ಪಾಟೀಲ, ಲೈಲಾ ಶುಗರ್ ಎಂ.ಡಿ. ಸದಾನಂದ ಪಾಟೀಲ,ಇಟಗಿ ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ತುರಮರಿ ಮತ್ತಿತರರು ಉಪಸ್ಥಿತರಿದ್ದರು.