ಮುಂಬೈ : ಕನ್ನಡ ನಾಡಿನೊಂದಿಗೆ ಆಳವಾದ ನಂಟು ಹೊಂದಿರುವ ಪ್ರತಿಭಾವಂತ ಕ್ರಿಕೆಟಿಗ ತನುಷ್ ಕೋಟ್ಯಾನ್ ಅವರು ಭಾರತ ಅಂಡರ್-19 ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದೀಗ ಕೆಚ್ಚೆದೆಯ ಆಟದ ಮೂಲಕ ಮುಂಬೈ ಮುಡಿಗೆ ಇರಾನಿ ಕಪ್ ದೊರೆಕಿಸಿಕೊಡುವ ಮೂಲಕ ಕಪ್ ಬರಕ್ಕೆ ಕೊನೆಗೂ ವಿರಾಮ ಒದಗಿಸಿಕೊಟ್ಟಿದ್ದಾರೆ.
ಉನ್ನತ ದರ್ಜೆಯ ಸ್ಕೋರ್ಗಳ ಸರಣಿಯು ಆಫ್-ಸ್ಪಿನ್ನಿಂಗ್ ಆಲ್-ರೌಂಡರ್ ಅನ್ನು ಮಲೇಷ್ಯಾದಲ್ಲಿ ಏಷ್ಯಾ ಕಪ್ ಆಡುವ U19 ತಂಡಕ್ಕೆ ಪ್ರೇರೇಪಿಸಿತ್ತು. IPL ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇರಾನಿ ಕಪ್ನಲ್ಲಿ ತನುಷ್ ಕೋಟ್ಯಾನ್ ಅವರು ಅತ್ಯಂತ ಸಮಯೋಚಿತ ಶತಕ ಬಾರಿಸಿದ್ದಾರೆ. ಈ ಮೂಲಕ 27 ವರ್ಷಗಳ ಬಳಿಕ ಮುಂಬೈ ಇರಾನಿ ಕಪ್ ಗೆದ್ದುಕೊಂಡಿದೆ. ಅಂತಿಮ ದಿನದಾಟದಲ್ಲಿ ನೆಲಕಚ್ಚಿ ಆಡಿದ ತನುಷ್ ಕೋಟ್ಯಾನ್ ಭಾರತ ಇತರರ ತಂಡದ ಪ್ರಶಸ್ತಿ ಆಸೆಗೆ ತಣ್ಣೀರು ಎರಚಿದ್ದಾರೆ.
ತನುಷ್ ಅವರ ಸಾಧನೆಯಿಂದಾಗಿ ಮುಂಬೈ ಹದಿನೈದನೇ ಬಾರಿಗೆ ಇರಾನಿ ಕಪ್ ಗೆದ್ದುಕೊಂಡಿದೆ. ತನುಷ್ ಕೋಟ್ಯಾನ್ ಅವರು ಮೋಹಿತ್ ಅವರ ಜೊತೆ ಒಂಬತ್ತನೇ ವಿಕೆಟಿಗೆ 158 ರನ್ ಗಳ ಜೊತೆಯಾಟ ಆಡಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಕ್ರಿಸಿಗೆ ಬಂದ ಕೋಟ್ಯಾನ್ ಅವರು ಅಮೋಘ 114 ರನ್ ಗಳಿಸಿ ಔಟ್ ಆಗದೆ ಉಳಿದರು. ಬೌಲಿಂಗ್ ನಲ್ಲಿ ಸಹ ಮಿಂಚಿದ ತನುಷ್ ಮೂರು ವಿಕೆಟ್ ಪಡೆದುಕೊಂಡಿದ್ದಾರೆ. 1997- 98ರ ಸಾಲಿನಲ್ಲಿ ಮುಂಬೈ ಕೊನೆಯ ಬಾರಿಗೆ ಇರಾನಿ ಗೆದ್ದಿತ್ತು. ಅಲ್ಲಿಂದ 8 ಸಲ ಫೈನಲ್ ತಲುಪಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2015-16ನೇ ಸಾಲಿನಲ್ಲಿ ಕೊನೆಯ ಬಾರಿಗೆ ಮುಂಬೈ ಫೈನಲ್ ತಲುಪಿತ್ತು. ಆದರೂ ಪ್ರಶಸ್ತಿ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕರ್ನಾಟಕ ಮೂಲದ ತನುಷ್ ಕೋಟ್ಯಾನ್ ಅವರಿಂದ ಮುಂಬೈ ಕೊನೆಗೂ ಇರಾನಿ ಕಪ್ ಗೆದ್ದುಕೊಂಡಿದೆ.
ಉಡುಪಿಯ ಪಾಂಗಾಳದ ಕರುಣಾಕರ್ ಮತ್ತು ಮಲ್ಲಿಕಾ ಕೋಟ್ಯಾನ್ ದಂಪತಿಯ ಪುತ್ರನಾಗಿ ಜನಿಸಿದ ತನುಷ್ ಮುಂಬೈನ ಚೆಂಬೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರು 1 ರಿಂದ 7 ನೇ ತರಗತಿಯವರೆಗೆ ವಿಕ್ರೋಲಿಯ ಸೇಂಟ್ ಜೋಸೆಫ್ ಶಾಲೆಯಲ್ಲಿ ಮತ್ತು 8 ರಿಂದ 10 ನೇ ತರಗತಿಯನ್ನು ವಿ ಎನ್ ಸುಲೆ ಗುರೂಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ್ದಾರೆ. ಅವರು ತಮ್ಮ ಮಾಧ್ಯಮಿಕ ಶಾಲೆ ಮತ್ತು ಕಾಲೇಜನ್ನು ರಾಮನಿರಂಜನ್ ಜುಂಜುನ್ವಾಲಾ ಕಾಲೇಜಿನಲ್ಲಿ ಮುಂದುವರಿಸಿದ್ದರು.
ಸ್ವಂತ ಪ್ರೇರಣೆಯಿಂದ ಬೆಳೆದ ಕ್ರಿಕೆಟಿಗನಾಗಿರುವ ತನುಷ್ ಮೈದಾನದಲ್ಲಿ ಅತ್ಯುತ್ತಮ ಆಟವಾಡಲು ಯಾವುದೇ ಗಾಡ್ಫಾದರ್ ಅಥವಾ ಕೋಚ್ ಅನ್ನು ಹೊಂದಿರಲಿಲ್ಲ. ಯುವಕ ತನುಷ್ ಇತರರು ಕ್ರಿಕೆಟ್ ಆಡುವುದನ್ನು ವೀಕ್ಷಿಸಿದ್ದು ಅವರನ್ನು ಆಟದತ್ತ ಆಕರ್ಷಿಸಿತು.
ತನುಷ್ ತಂದೆ ಶಾಂತಿಭಾಯಿ ಸೇಠ್ ಸ್ಮಾರಕ ಸಿಸಿಗಾಗಿ ‘ಎ’ ಡಿವಿಷನ್ ಕ್ರಿಕೆಟ್ ಆಡುತ್ತಿದ್ದರು. ಬಿಡುವಿನ ವೇಳೆಯಲ್ಲಿ ತನುಷ್ಗೆ ತರಬೇತಿಯನ್ನೂ ನೀಡುತ್ತಿದ್ದರು. ಯುವಕ ತನುಷ್ ಸಣ್ಣ ತಂಡಗಳು ಮತ್ತು ಪ್ರಮುಖ ತಂಡಗಳ ಆಟಗಳನ್ನು ವೀಕ್ಷಿಸುತ್ತಾ ಆಟವನ್ನು ಚೆನ್ನಾಗಿ ಆಡಲು ಆರಂಭಿಸಿದರು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕಲೆಯನ್ನು ಪರಿಪೂರ್ಣಗೊಳಿಸಲು ಅವರು ಯೂಟ್ಯೂಬ್ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿದ್ದರು.
ಅತ್ಯಂತ ಪ್ರತಿಭಾವಂತ ಆಲ್ರೌಂಡಿಂಗ್ ಪ್ರತಿಭೆಯು ತನ್ನ ಕಾಲೇಜು ತಂಡ, ವಿವಿಧ ಕ್ಲಬ್ಗಳು ಮತ್ತು ಮುಂಬೈಗಾಗಿ ಬ್ಯಾಟ್ ಮತ್ತು ಬಾಲ್ ಆಡುವ ಮೂಲಕ ಕೆಲವು ಪ್ರಭಾವಶಾಲಿ ಆಟಗಾರರಾಗಿ ಬೆಳೆದಿದ್ದಾರೆ.
ಅವರ ಕೆಲವು ಗಮನಾರ್ಹ ಪ್ರದರ್ಶನಗಳು ಹೀಗಿವೆ ರಾಮನಿರಂಜನ್ ಜುಂಜುನ್ವಾಲಾ ಕಾಲೇಜು ಮತ್ತು ಕೆಜೆ ಸೋಮಯ್ಯ ನಡುವಿನ ಎಲ್ಲಾ ಪ್ರಮುಖ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಕೇವಲ 80 ಎಸೆತಗಳಲ್ಲಿ 121 ರನ್ ಮತ್ತು ಅಜೇಯ 56 ಎಸೆತಗಳಲ್ಲಿ ಅಮ್ಹಿ ಮುಲುಂಡ್ಕರ್ ತಂಡದ ಪರ ಶತಕ ಮತ್ತು 16/4 ವಿಕೆಟ್ ಪಡೆದರು. ಬ್ಯಾಟಿಂಗ್ ಕ್ರಮಾಂಕಕ್ಕೆ ಬಂದ ತನುಷ್ ಮನಸೋ ಇಚ್ಛೆ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದ್ದಾರೆ.
U19 ನರೇನ್ ತಮ್ಹಾನೆ ಟ್ರೋಫಿಯಲ್ಲಿ ತನುಷ್ ಅವರ 116 ರನ್ ಮತ್ತು 4 ವಿಕೆಟ್ ಗಳಿಕೆಯನ್ನು ಇತ್ತೀಚೆಗೆ ಪ್ರಮುಖ ಕ್ರಿಕೆಟ್ ವೆಬ್ಸೈಟ್ ಮುಂಬೈನ ಕ್ಲಬ್ ಕ್ರಿಕೆಟ್ ಪ್ರದರ್ಶನದಲ್ಲಿ ಮೂರನೇ ಅತ್ಯುತ್ತಮ ಪ್ರದರ್ಶನವೆಂದು ಪಟ್ಟಿ ಮಾಡಿದೆ.
ಮುಂಬೈ ಮತ್ತು ಗುಜರಾತ್ ವಿನೂ ಮಂಕಡ್ ಟ್ರೋಫಿ U19 ಪಂದ್ಯದ ಎರಡು ಬಲಿಷ್ಠ ತಂಡಗಳ ನಡುವಿನ ಪಂದ್ಯದಲ್ಲಿ, ಎಡಗೈ ಸ್ಪಿನ್ನರ್ 10 ಓವರ್ಗಳಲ್ಲಿ 6/31 ಎಂಬ ಅತ್ಯುತ್ತಮ ಬೌಲಿಂಗ್. ತನುಷ್ ಸಾಮಾನ್ಯವಾಗಿ ಸರಿಯಾದ ಪ್ರದೇಶಗಳಲ್ಲಿ ಬೌಲಿಂಗ್ ಮಾಡುತ್ತಾರೆ ಮತ್ತು ಕ್ರಿಕೆಟ್ ಚೆಂಡಿನ ಪ್ರಬಲ ಸ್ಟ್ರೈಕರ್ ಆಗಿದ್ದಾರೆ.
ಆಗಾಗ ತಂದೆ ಮತ್ತು ತಾಯಿಯ ತವರಿಗೆ ಆಗಮಿಸುವ ತನುಷ್ ಕೋಟ್ಯಾನ್ ಮುಂದೊಂದು ದಿನ ಭಾರತ ತಂಡದಲ್ಲಿ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ಸಾಧನೆಯಿಂದ ನನ್ನ ಪೋಷಕರು, ಸಂಬಂಧಿಕರು, ಸ್ನೇಹಿತರು ಮತ್ತು ಶಿಕ್ಷಕರು ಸಂತೋಷಪಟ್ಟಿದ್ದಾರೆ. ನಾಲ್ಕು ವಿನೂ ಮಂಕಡ್ ಟ್ರೋಫಿ ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಮತ್ತು 120 ರನ್ ಗಳಿಸಿದ ನನ್ನ ಸಾಧನೆಯನ್ನು ಶ್ಲಾಘಿಸಲಾಗುತ್ತಿದೆ. ನನ್ನ ಕೈಲಾದಷ್ಟು ಮಾಡುವ ಭರವಸೆ ನನಗಿದೆ. ನಾನು ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವಾಗ ನನ್ನ ಎಲ್ಲಾ ಶ್ರಮ ಮತ್ತು ಸಮರ್ಪಣೆ ಯಶಸ್ವಿಯಾಗುತ್ತದೆ. ಮುಂದೊಂದು ದಿನ ಭಾರತ ತಂಡದಲ್ಲಿ ಆಡುವ ಭರವಸೆ ನನಗಿದೆ ಎಂದು 25 ವರ್ಷದ ತನುಷ್ ಕೋಟ್ಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋಟ್ಯಾನ್ ಶತಕ; 27 ವರ್ಷಗಳ ಬಳಿಕ ಇರಾನಿ ಕಪ್ ಗೆದ್ದ ಮುಂಬೈ :
ತನುಷ್ ಕೋಟ್ಯಾನ್ ಸಮಯೋಚಿತ ಶತಕದ (114*) ಬೆಂಬಲದೊಂದಿಗೆ ಮುಂಬೈ ತಂಡವು, 27 ವರ್ಷಗಳ ಬಳಿಕ ಇರಾನ್ ಕಪ್ ಗೆದ್ದುಕೊಂಡಿದೆ. ಅಂತಿಮ ದಿನದಾಟದಲ್ಲಿ ನೆಲಕಚ್ಚಿ ಆಡಿದ ತನುಷ್ ಕೋಟ್ಯಾನ್ ಭಾರತ ಇತರರ ತಂಡದ ಪ್ರಶಸ್ತಿ ಆಸೆಗೆ ತಣ್ಣೀರೆರಚಿದರು.
ಲಖನೌದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಇತರರ ತಂಡದ ವಿರುದ್ಧ ಪಂದ್ಯವು ಡ್ರಾದಲ್ಲಿ ಅಂತ್ಯ ಕಂಡಿದೆ. ಆ ಮೂಲಕ ಮುಂಬೈ, 15 ನೇ ಸಲ ಇರಾನಿ ಕಪ್ ಗೆದ್ದ ಸಾಧನೆ ಮಾಡಿದೆ.
ಒಟ್ಟಾರೆಯಾಗಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಹಾಲಿ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ, ಇರಾನಿ ಕಪ್ ಗೆದ್ದ ಸಾಧನೆ ಮಾಡಿದೆ.
ಮುಂಬೈ ನಾಲ್ಕನೇ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಒಟ್ಟಾರೆ 274 ರನ್ಗಳ ಮುನ್ನಡೆ ಗಳಿಸಿತ್ತು. ಇದರಿಂದ ಪಂದ್ಯದಲ್ಲಿ ತಿರುಗೇಟು ನೀಡುವ ಅವಕಾಶ ಭಾರತ ಇತರರ ತಂಡಕ್ಕಿತ್ತು.
ಕೋಟ್ಯಾನ್ ಅವರು ಮೋಹಿತ್ ಅವಸ್ತಿ ಜತೆ ಮುರಿಯದ ಒಂಬತ್ತನೇ ವಿಕೆಟ್ಗೆ 158 ರನ್ಗಳ ಜೊತೆಯಾಟ ಕಟ್ಟಿದರು. ಮೋಹಿತ್ 51 ರನ್ ಗಳಿಸಿ ಅಜೇಯರಾಗುಳಿದರು.
ಎಂಟನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಕೆಚ್ಚೆದೆಯ ಇನಿಂಗ್ಸ್ ಕಟ್ಟಿದ ಕೋಟ್ಯಾನ್ 114 ರನ್ ಗಳಿಸಿ ಔಟಾಗದೆ ಉಳಿದರು. ಪರಿಣಾಮ ಮುಂಬೈ ಎಂಟು ವಿಕೆಟ್ ನಷ್ಟಕ್ಕೆ 329 ರನ್ ಪೇರಿಸಿ ಡಿಕೇರ್ ಘೋಷಿಸಿತು. ಆ ಮೂಲಕ ಒಟ್ಟಾರೆ 450 ರನ್ಗಳ ಮುನ್ನಡೆ ಗಳಿಸಿತು.
ಬಳಿಕ ದಿನದಾಟದ ಉಳಿದಿರುವ ಅವಧಿಯಲ್ಲಿ ಗುರಿ ಮುಟ್ಟುವುದು ಅಸಾಧ್ಯವೆನಿಸಿದ್ದರಿಂದ ಪಂದ್ಯ ಡ್ರಾಗೊಳಿಸಲು ಉಭಯ ತಂಡದ ನಾಯಕರು ನಿರ್ಧರಿಸಿದರು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಮುಂಬೈ ವಿಜಯಿಶಾಲಿಯಾಗಿ ಹೊರಹೊಮ್ಮಿತು.
ಭಾರತ ಇತರರ ತಂಡದ ಪರ ಆರು ವಿಕೆಟ್ ಗಳಿಸಿದ ಸಾರಾಂಶ್ ಜೈನ್ ಹೋರಾಟ ವ್ಯರ್ಥವೆನಿಸಿತು.
ಈ ಮೊದಲು ಸರ್ಫರಾಜ್ ಖಾನ್ ಅಮೋಘ ದ್ವಿಶತಕದ (222*) ಬೆಂಬಲದಿಂದ ಮುಂಬೈ ಮೊದಲ ಇನಿಂಗ್ಸ್ನಲ್ಲಿ 537 ರನ್ ಪೇರಿಸಿತ್ತು. ಭಾರತ ಇತರರ ತಂಡದ ಪರ ಮುಕೇಶ್ ಕುಮಾರ್ ಐದು ವಿಕೆಟ್ ಗಳಿಸಿದರು.
ಬಳಿಕ ಅಭಿಮನ್ಯು ಈಶ್ವರನ್ ದಿಟ್ಟ ಹೋರಾಟದ (191) ಹೊರತಾಗಿಯೂ ಭಾರತ ಇತರರ ತಂಡ 416 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಮುಂಬೈ ಪರ ತನುಷ್ ಕೋಟ್ಯಾನ್ ಮೂರು ವಿಕೆಟ್ ಗಳಿಸಿದ್ದರು.
1997-98ನೇ ಸಾಲಿನಲ್ಲಿ ಮುಂಬೈ ಕೊನೆಯ ಬಾರಿ ಇರಾನಿ ಕಪ್ ಗೆದ್ದಿತ್ತು. ಅಲ್ಲಿಂದ ಬಳಿಕ ಎಂಟು ಸಲ ಫೈನಲ್ಗೆ ಪ್ರವೇಶಿಸಿದ್ದರೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. 2015-16ರ ಸಾಲಿನಲ್ಲಿ ಕೊನೆಯ ಬಾರಿ ಫೈನಲ್ಗೆ ಲಗ್ಗೆಯಿಟ್ಟಿತ್ತು.