ಬೆಂಗಳೂರು :
ಕಳೆದ ವರ್ಷ ಅಕಾಲಿಕವಾಗಿ ನಿಧನರಾದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರಿಗೆ ರಾಜ್ಯದ ಸರ್ವೋಚ್ಚ ನಾಗರಿಕ ಗೌರವವಾದ ಕರ್ನಾಟಕ ರತ್ನವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಲಿದ್ದಾರೆ.
ಮಂಗಳವಾರ ವಿಧಾನಸೌಧದ ಎದುರು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಖ್ಯಾತ ನಟರಾದ ರಜನಿಕಾಂತ್, ಜೂನಿಯರ್ ಎನ್ಟಿಆರ್, ಸಮಾಜಸೇವಕಿ, ಲೇಖಕಿ ಸುಧಾ ಮೂರ್ತಿ ಸೇರಿದಂತೆ ಗಣ್ಯ ಮಾನ್ಯರು ಭಾಗವಹಿಸುವರು. 1992 ರಲ್ಲಿ ಸ್ಥಾಪನೆಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇದುವರೆಗೆ 9ಗಣ್ಯರಿಗೆ ನೀಡಲಾಗಿತ್ತು.