⏩ ಕರುನಾಡ ಕದನಕ್ಕೆ ಕಹಳೆಯೂದಿದ ಚುನಾವಣಾ ಆಯೋಗ
⏩ ಒಂದು ಹಂತದ ಚುನಾವಣೆ
ಮೇ 10 2023 ಕ್ಕೆ
⏩ ಚುನಾವಣಾ ಫಲಿತಾಂಶ – ..13 ಮೇ 2023*
ನವದಿಲ್ಲಿ : ಜನ ಜೀವಾಳ ಜಾಲ: ಕರ್ನಾಟಕ ಚುನಾವಣಾ ಕದನಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ದೆಹಲಿಯಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಕಹಳೆಯೂದಿದ್ದಾರೆ. ರಾಜ್ಯ ವಿಧಾನಸಭೆಯ ಚುನಾವಣೆ ಮೇ 10 ಕ್ಕೆ ನಿಗದಿಯಾಗಿದೆ. ಮತದಾನ ಒಂದೇ ಹಂತದಲ್ಲಿ ನಡೆಯಲಿದೆ.
ಮೇ 13 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳಲಿದೆ. ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು.
ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ ಹಾಗೂ ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ರಂದು ಕೊನೆಯ ದಿನ.
ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿದೆ. 224 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ಜರುಗಲಿದೆ. ಕರ್ನಾಟಕದ ಚುನಾವಣಾ ಸಿದ್ಧತೆ ಎಲ್ಲವೂ ಮುಗಿದಿದೆ. 5,21,73, 579 ಮತದಾರರು ಮತ ಚಲಾಯಿಸಲಿದ್ದಾರೆ. 80+ಮತದಾರರಿಗೆ ಮೊದಲ ಬಾರಿ ಮನೆಯಿಂದ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಸೇರಿ 58,282 ಮತಗಟ್ಟೆ ಮಾಡಲಾಗಿದೆ. ಮುಕ್ತ ನ್ಯಾಯಸಮ್ಮತ ಚುನಾವಣೆ ನಮ್ಮದಾಗಿದೆ ಎಂದರು. ಅಕ್ರಮ ತಡೆಗೆ 2400 ತಂಡ ರಚಿಸಲಾಗಿದೆ. ಮೇ 24 ಕ್ಕೆ ಕರ್ನಾಟಕ ವಿಧಾನಸಭೆಯ ಅವಧಿ ಮುಕ್ತಾಯವಾಗುತ್ತಿದೆ. ಚುನಾವಣೆ ನಡೆಯಲಿದೆ ಈ ಮೂಲಕ ಕರುನಾಡ ಜನತೆಯ ಕೌತುಕಕ್ಕೆ ತೆರೆ ಎಳೆದಿದೆ.