ಬೆಳಗಾವಿ : ಗೋವಾ ವೇಸ್ ಸಿಗ್ನಲ್ ಬಳಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಖಾನಾಪುರ ತಾಲೂಕು ಕಾಪೋಲಿ ಗ್ರಾಮದ ಸುನಿಲ್ ದಿಲೀಪ್ ದೇಸಾಯಿ( 42 )ಎಂಬುವವರು ಮೃತಪಟ್ಟಿದ್ದಾರೆ.
ಸುನಿಲ್ ದೇಸಾಯಿ ಅವರು ತಮ್ಮ ಬೈಕಿನಲ್ಲಿ ಆರ್ಪಿಡಿ ಕಾಲೇಜು ರಸ್ತೆಯಿಂದ ಗೋವಾವೇಸ್ ಕಡೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಆಗಮಿಸಿ ದೂರು ದಾಖಲು ಮಾಡಿಕೊಂಡಿದ್ದಾರೆ.