ಬೆಳಗಾವಿ: ಬೆಳಗಾವಿಯ ಕನ್ವಿಕಾ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವರದಕ್ಷಿಣೆ ಕಿರುಕುಳ ಎಂದು ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಲ್ಲದೇ, ನಂಬಿಸಿ ಮೋಸ ಮಾಡಿದ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಆಕೆ ನನಗೆ ಮೋಸ ಮಾಡಿದ್ದಾಳೆ ಎಂದು ಆಕೆಯ ಪತಿಯೇ ಇದೀಗ ಬೆಳಗಾವಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಪ್ರಥ್ವಿ ಸಿಂಗ್ ಮತ್ತು ಕನ್ವಿಕಾ ವಿರುದ್ಧ ಮಹಿಳೆಯ ಪತಿ ಗಣೇಶ್ ಎಂಬವರು ಇದೀಗ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು ಘಟನೆ ಮುಂದೆ ಎಲ್ಲಿಗೆ ತಲುಪುತ್ತದೋ ಕಾದು ನೋಡಬೇಕಾಗಿದೆ.
ಎಂಜಿನಿಯರಿದ್ದೇನೆ, ನನಗೆ ಲಕ್ಷ ಸಂಬಳ ಇದೆ ಎಂದು ನಂಬಿಸಿ ಮದುವೆ ಮಾಡಿಕೊಂಡಿದ್ದಾನೆ ಎಂದು ಗಣೇಶ್ ಪತ್ನಿ ಕನ್ವಿಕಾ ಆರೋಪ ಮಾಡಿದ್ದಳು. ವರದಕ್ಷಿಣೆ ಕಿರುಕುಳವನ್ನು ಸಹಾ ನೀಡುತ್ತಿದ್ದಾರೆ ಎಂದು ದೂರಿ ಆಕೆ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಳು. ನಂತರ ದೂರು ದಾಖಲು ಮಾಡಿದಳು. ಗಣೇಶ್ ತಂದೆ ಪ್ರಥ್ವಿಸಿಂಗ್ ಮತ್ತು ಸೊಸೆ ಕನ್ವಿಕಾ ವಿರುದ್ಧ ದೂರು ದಾಖಲಿಸಿದ್ದಾರೆ. ಶಾಲಾ ದಿನಗಳಿಂದ ಸ್ನೇಹಿತರಾಗಿದ್ದ ಗಣೇಶ್ ಮತ್ತು ಕನ್ನಿಕಾ ಪ್ರೀತಿಸುತ್ತಿದ್ದಾರೆ ಎಂದು ಮದುವೆ ಮಾಡಿ ಕೊಳ್ಳುವಂತೆ ಪ್ರಥ್ವಿಸಿಂಗ್ ಕಿರುಕುಳ ನೀಡಿದ್ದಲ್ಲದೆ ಗಣೇಶನ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದ. ಇದರಿಂದ 2023ರ ಸೆಪ್ಟೆಂಬರ್ 21ರಂದು ಗಣೇಶ್ ಜೊತೆ ಕನ್ವಿಕಾ ವಿವಾಹ ಮಾಡಲಾಗಿತ್ತು. ಆದರೆ ಆಕೆ ದುಶ್ಚಟಗಳಿಗೆ ಅಂಟಿಕೊಂಡಿರುವುದನ್ನು ಮರೆಮಾಚಿ ಪ್ರಥ್ವಿಸಿಂಗ್ ಮದುವೆ ಮಾಡಿಸಲು ಒತ್ತಡ ಹಾಕಿದ್ದಾನೆ. ಎರಡು, ಮೂರು ದಿನಗಳಿಂದ ಮನೆಯಿಂದ ಹೊರಗೆ ಹೋಗಿರುವುದನ್ನೇ ಪ್ರಶ್ನಿಸಿದ್ದ ಪತಿಯ ಮನೆಗೆ ಕನ್ವಿಕಾ ಮತ್ತು ಪ್ರಥ್ವಿಸಿಂಗ್ ಸೇರಿ ಇತರರು ಅಕ್ರಮ ಪ್ರವೇಶ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಮದುವೆ ನಂತರವೂ ಕನ್ವಿಕಾ ಗಾಂಜಾ, ಸಿಗರೇಟ್, ಮದ್ಯ ಸೇವಿಸುತ್ತಿದ್ದಳು ಎಂಬ ಆರೋಪ ಮಾಡಿರುವ ಗಣೇಶ ಮತ್ತು ಕುಟುಂಬ ಈಗ ಆಕೆಯ ಫೋಟೋಗಳನ್ನು ಬಿಡುಗಡೆ ಮಾಡಿದೆ. ಯಾವುದೇ ಸಕಾರಣವಿಲ್ಲದೆ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಒಟ್ಟಾರೆ ದೂರಿಗೆ ಪ್ರತಿ ದೂರು ಸಲ್ಲಿಕೆಯಾಗಿದ್ದು ಪೊಲೀಸರು ಯಾರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಾಗಿದೆ.